ಸುರಪುರ: ತಾಲೂಕಿನ ಸೂಗೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಮುಖಂಡರು ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸೂಗೂರು ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಶಾಲೆಯಲ್ಲಿನ ಮಕ್ಕಳಿಗೆ ಬಿಸಿಯೂಟಕ್ಕಾಗಿ ತರಕಾರಿ ಖರಿದಿಗೆ ಬರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ಮಕ್ಕಳಿಗೆ ಸರಿಯಾದ ಬಿಸಿಯೂಟ ನೀಡುತ್ತಿಲ್ಲ,ವಾರಕ್ಕೆ ಒಂದು ಬಾರಿ ತರಕಾರಿ ತಂದು ಹಾಕಿದರು ಅದು ಕೊಳೆತ ತರಕಾರಿ ತರುತ್ತಾರೆ.
ಮಕ್ಕಳಿಗೆ ಪೌಷ್ಟಿಕತೆಗಾಗಿ ಮೊಟ್ಟೆ,ಚೆಕ್ಕಿ ಮತ್ತಿತರೆ ಪದಾರ್ಥಗಳು ನೀಡಬೇಕಿದ್ದರು ನೀಡದೆ ಕೇವಲ ಅನ್ನ ಮಾತ್ರ ನೀಡುತ್ತಿದ್ದಾರೆ,ಇದನ್ನು ಹೊರಗಡೆ ಯಾರಿಗಾದರು ಹೇಳಿದರೆ ಥಳಿಸುವುದಾಗಿ ಮಕ್ಕಳಿಗೆ ಬೆದರಿಕೆ ಹಾಕುತ್ತಾರೆ,ಅಡುಗೆ ಸಿಬ್ಬಂದಿಗಳು ಯಾರಿಗೂ ಹೇಳದಂತೆ ಬೆದರಿಸುತ್ತಾರೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಮುಖ್ಯಗುರು ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಬಿಇಓ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಬರೆದ ಮನವಿ ಯಲ್ಲಪ್ಪ ಕಾಡ್ಲೂರ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಭೂಮಶೆಟ್ಟಿ,ಉಪಾಧ್ಯಕ್ಷ ವಿನೋದಕುಮಾರ,ಗ್ರಾಮ ಶಾಖೆ ಉಪಾಧ್ಯಕ್ಷ ಸುನೀಲಕುಮಾರ,ವಿಜಯಕುಮಾರ,ಬಸನಗೌಡ ಕಮತಗಿ,ಬಸವರಾಜ ವಿಶ್ವಕರ್ಮ,ಪ್ರಶಾಂತ,ರವಿ,ಅಮರಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.