ಸುರಪುರ: ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ಬೆಂಗಳೂರಲ್ಲಿನ ಎಲ್ಲ ಅಂಗಡಿ ಮುಂಗಟ್ಟು ವಾಣಿಜ್ಯ ಕೇಂದ್ರಗಳ ಮೇಲೆ ಕನ್ನಡ ನಾಮಫಲಕ ಹಾಕಲು ಆಗ್ರಹಿಸಿ ಡಿಸೆಂಬರ್ 27 ರಂದು ನಡೆಸಲಿರುವ ಪ್ರತಿಭಟನೆಗೆ ಎಲ್ಲರು ಭಾಗವಹಿಸೋಣ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ತಿಳಿಸಿದರು.
ನಗರದ ಕರವೇ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಸಂಸ್ಥೆ, ವಾಣಿಜ್ಯ ಮಳಿಗೆಗಳ, ಖಾಸಗಿ/ಸರ್ಕಾರಿ ಸಾರ್ವಜನಿಕ ಮಳಿಗೆಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವ ಕುರಿತು ಸಾಕಷ್ಟು ಮನವಿ ಮಾಡಿದರೂ ಸಹ ಕನ್ನಡ ನಾಮಫಲಕ ಅಳವಡಿಸಿ ಕೊಳ್ಳುತ್ತಿಲ್ಲ.
ಅನ್ಯ ರಾಜ್ಯದ ವ್ಯಾಪಾರಿಗಳು ಮತ್ತು ಸ್ಥಳೀಯ ರೂ ಸೇರಿ ಕನ್ನಡ ನಾಮಫಲಕ ಶೇಕಡಾ ಎಂಭತ್ತು ರಷ್ಟು ಕನ್ನಡ ಭಾಷೆಯಲ್ಲಿರಬೇಕೆಂಬ ಸರ್ಕಾರದ ಆದೇಶ ವಿದ್ದರೂ ಸಹ ದಿಕ್ಕರಿಸಿ ಆಂಗ್ಲ ಬಾಷೆ ಸೇರಿ ಇನ್ನಿತರ ಭಾಷೆಗಳಲ್ಲಿ ನಾಮಫಲಕ ಅಳವಡಿಸಿರುತ್ತಾರೆ.ಇದನ್ನು ವಿರೋಧಿಸಿ ಕರವೇ ಪ್ರತಿಭಟನೆ ಮಾಡಿದರೆ ಅವರ ಮೇಲೆಯೇ ಪ್ರಕರಣ ದಾಖಲು ಮಾಡಲು ಪ್ರಭಾವಿ ಉದ್ಯಮಿಗಳು ಸಂಚು ನಡೆಸಿರುತ್ತಾರೆ.
ನಮ್ಮ ನಾಡಿನ ಅನ್ನ ತಿಂದು ಕಾವೇರಿ ನೀರು ಕುಡಿದು ಜೀವಿಸಿ ಬದುಕುತ್ತಿರುವ ಕನ್ನಡ ಭಾಷೆ ಯ ಬಗ್ಗೆ ಅಸಡ್ಡೆ ತೋರಿಸುತ್ತಿರುವ ನಾಡ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಆದ ಕಾರಣ ಇವರ ಕನ್ನಡ ವಿರೋಧಿ ಧೋರಣೆ ಯನ್ನು ಖಂಡಿಸಿ ಅಂದು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಕಬ್ಬನ್ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ ಆದಕಾರಣ ತಾಲೂಕಿನ ಎಲ್ಲಾ ಕರವೇ ಸೇನಾನಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ಪ್ರಧಾನ ಕಾರ್ಯದರ್ಶಿ ಹಣಮಗೌಡ ಶಖಾಪುರ, ಗೌರವ ಅಧ್ಯಕ್ಷರಾದ ಶ್ರೀನಿವಾಸ ಡಿ ನಾಯಕ್, ಪ್ರಧಾನ ಸಂಚಾಲಕರಾದ ಶ್ರೀನಿವಾಸ ಲಕ್ಷ್ಮೀಪುರ, ಸಹ ಕಾರ್ಯದರ್ಶಿಗಳಾದ ಕೃಷ್ಣ ಮಂಗಿಹಾಳ, ಹಾಗೂ ಅನಿಲ ಬಿರಾದಾರ, ಸಂಚಾಲಕರಾದ ಹಣಮಂತ ಹಾಲಗೇರಿ, ಸಂ,ಕಾರ್ಯದರ್ಶಿ ಸೋಮಯ್ಯ ಹಾಲಗೇರಿ, ಸಾಮಾಜಿಕ ಜಾಲತಾಣ ಸಂಚಾಲಕರಾದ ರಂಗನಾಥ ಬಿರಾದಾರ, ಯುವ ಘಟಕದ ಅಧ್ಯಕ್ಷ ನಾಗರಾಜ ಡೊಣ್ಣಿಗೇರಿ, ಗೌರವಾಧ್ಯಕ್ಷ ಸಾಯಬಣ್ಣ ದೊರೆ,ನಗರ ಘಟಕದ ಅಧ್ಯಕ್ಷ ಮಲ್ಲು ವಿಷ್ಣುಸೇನಾ, ನಿಂಗಪ್ಪ ಯಾದವ,ದೇವು ಗುಡ್ಡ ಕಾಯಿ, ಕೆಂಭಾವಿ ವಲಯ ಅಧ್ಯಕ್ಷ ಕುಮಾರ ಮೊಪಗಾರ, ಆಟೋ ಘಟಕದ ಮಲ್ಲಪ್ಪ ಹಸನಾಪೂರ, ಆನಂದ ಗುಡ್ಡಕಾಯಿ, ಕೃಷ್ಣ ರತ್ತಾಳ, ಕೆಂಭಾವಿ ವಲಯದ ಭಾವಾಸಾಬ್ ಪರಸನಳ್ಳಿ, ವಿವಿಧ ಗ್ರಾಮಗಳ ಗ್ರಾಮಶಾಖೆಯ ಅಧ್ಯಕ್ಷರುಗಳಾದ ಬಲಭೀಮ ಬೊಮ್ಮನಹಳ್ಳಿ, ಮಹಾರಾಜ ಹೆಮ್ಮಡಗಿ, ರಾಮನಗೌಡ ಶಾಖಾಪುರ, ಆಂಜನೇಯ ಅಡ್ಡೋಡಗಿ, ಪ್ರಭು ಮಂಗಿಹಾಳ, ತಿರುಪತಿ ಬಿ,ತಳಹಳ್ಳಿ , ಬಸವರಾಜ ಕಾಚಾಪೂರ, ದೇವಿಂದ್ರಪ್ಪ ಗೌಡ ಚಂದ್ಲಾಪೂರ, ರವಿಕಾಂತ ನಗನೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು