ಯಾದಗಿರಿ: ತಾಲೂಕು ಪಂಚಾಯತಿ ಕಾರ್ಯನಿರ್ವಕ ಅಧಿಕಾರಿ ಮಲ್ಲಿಕಾರ್ಜುನ ಸಂಗವಾರ್ ಇವರು ನಾಯ್ಕಲ ತಾ ವಡಗೇರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎನ್.ಆರ್.ಎಂ.ಎಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಜೊತೆಗೆ ಗ್ರಾಮ ಪಂಚಾಯತಿಯಲ್ಲಿ ಚರ್ಚಿಸಿದರು. ನಂತರ ಟಿಪ್ಪು ಸುಲ್ತಾನ್ ಸಂಜೀವಿನಿ ಸ್ವಹಾಸಹಾಯ ಸಂಘ ಹಾಗೂ ಮೌಲಾ ಅಲಿ ಸಂಜೀವಿನಿ ಸ್ವಾಹ ಸಂಘ ಕೆ ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚಿಸಿದರು.
ಸ್ವಸಹ ಸಂಘಗಳು ಅಭಿವೃದ್ಧಿಯಾಗಬೇಕೆಂದರೆ ಪ್ರತಿಯೊಬ್ಬ ಮಹಿಳೆಯರು ಸ್ವಾಹಾ ಉದ್ಯೋಗವನ್ನು ಕೈಗೊಳ್ಳಬೇಕು ಈಗಿನ ಕಾಲದಲ್ಲಿ ರೋಟ್ಟಿಕೇಂದ್ರ ಪತ್ರೊಳಿ ತಯಾರಿಕೆ ಕ್ಯಾಂಡಲ್ ತಯಾರಿಕೆ ಆಹಾರ ಉತ್ಪನ್ನಗಳ ತಯಾರಿಕೆ ಸಾವಿರ ಆದಾಯ ಉತ್ಪನ್ನ ಚಟುವಟಿಕೆಗಳು ಇವೆ ಇವುಗಳನ್ನು ನೀವು ಮಾಡಿದಾಗ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ನಾಯ್ಕಲ ಗ್ರಾಮದಲ್ಲಿ ಸಂಜಿವೀನಿ ಮಿನಿ ಬಿಗ್ ಬಜರ್ ಅರಂಬಿಸಲು ಯೋಜಿಸಲಾಯಿತ್ತು.
ಸಂಜಿವಿನಿ ಸಂಘಗಳು ಉತ್ಪದಿಸಿದ ಎಲ್ಲಾ ಉತ್ಪನ್ನಗಳು ಒಂದೆ ಕಡೆ ಸಿಗೂವಂತೆ ಮಾಡಬೆಕು, ನಾವು ಸರಕಾರದಿಂದ ಯಾವುದೇ ಸೌಲತ್ತುಗಳಿದ್ದರೂ ಕೂಡ ನಿಮ್ಮ ಗ್ರಾಮದ ಒಕ್ಕೂಟಕ್ಕೆ ಸ್ವಾಸಹಾಯ ಸಂಘಗಳಿಗೆ ಸಹಾಯ ಮಾಡುತ್ತೇನೆ ನಿಮ್ಮ ಸಂಘದ ಮಹಿಳೆಯರ ಮನೆಗಳಲ್ಲಿ ನಿರುದ್ಯೋಗಿ ವಿದ್ಯಾರ್ಥಿಗಳು ಇದ್ದರೆ ಅವರ ಪಟ್ಟಿ ಮಾಡಿಕೊಡಿ ಅವರಿಗೆ ಕಂಪ್ಯೂಟರ್ ತರಬೇತಿ ಟೈಲರಿಂಗ್ ತರಬೇತಿ ಮುಂತಾದವುಗಳ ಬಗ್ಗೆ ತರಬೇತಿಗಳನ್ನು ಕೊಡಿಸಿ ಅಭಿವೃದ್ದಿಯಾಗಲು ಸಹಕರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಬಿಕೆ ಯಾದ ಶಶಿಕಲಾ ಎಲ್ ಸಿ ಆರ್ ಪಿ ಯಾದ ಪರ್ವೀನ್ ಕೃಷಿಸಕಿ ಪಶುಸಕಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷಮಹೆರೂನ್ನಿಸ ಶೇಕ್ ಅಬ್ದುಲ್ ನಬಿ, ಉಪಾಧ್ಯಕ್ಷ ಎಲ್ಲಮ್ಮ ಮೋನಪ್ಪ ದೊರೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಆನ್ಸುಗೂರು, ಸದಸ್ಯ ಜಾವಿದ್ ಸಾಬ್ ಕುರುಕುಂದ, ಈಶಪ್ಪ ಕೊಳೂರು ಸ್ವಚ್ಛತಾ ಸಿಬ್ಬಂದಿ ಇತರರು ಇದ್ದರು.