ಕಲಬುರಗಿ; ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರ 35 ನೇ ವರ್ಷದ ವಧರ್ಂತಿ ಉತ್ಸವ ಸೋಮವಾರ ವೈಭದಿಂದ ನೆರವೇರಿತು.
ಅರ್ಚಕರಾದ ಗುಂಡಾಚಾರ್ಯ ನರಿಬೊಳ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಕಲಬುರಗಿಯ ವಿವಿಧ ಪಾರಾಯಣ ಸಂಘಗಳ ಸದಸ್ಯರಿಂದ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಪಂ ಅಭಯಾಚಾರ್ಯ ಅವರಿಂದ ಸುಂದರಕಾಂಡ ಪ್ರವಚನ, ನಂತರ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರಿಂದ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು.
ಅರ್ಚಕರಾದ ಗುಂಡಾಚಾರ್ಯ ನರಿಬೊಳ ಮಾತನಾಡುತ್ತ ಹನುಮಂತ ದೇವರ ನೆನೆದರೆ ಹಾರಿಹೋಗುವದು ಪಾಪ ಎಂಬುವಂತೆ ಹನುಮಂತ ದೇವರ ದರ್ಶನ ಮಾಡಿ ಸೇವೆ ಮಾಡಿದರೆ ಸಕಲ ದುಃಖಗಳು ಪಾಪಗಳು ಪರಿಹಾರವಾಗಿ ಸಕಲ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಪಂ ಅಭಯಾಚಾರ್ಯ, ಪಂ ಭಾರತೀಶಾಚಾರ್ಯ, ಸರ್ವೋತ್ತಮಾಚಾರ್ಯ, ಡಿ ವಿ ಕುಲಕರ್ಣಿ, ರವಿ ಲಾತುರ್, ಭಿಮಾಚಾರ್ಯ, ಶಾಮರಾವ ಕುಲಕರ್ಣಿ, ಸೇರಿದಂತೆ ಮಹಿಳಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು.