ಕಲಬುರಗಿ : ಭಾರತ ದೇಶ ವಿವಿಧಯಲ್ಲಿ ಏಕತೆ ಹೊಂದಿದ್ದು, ಅನೇಕ ಧರ್ಮ, ಜಾತಿಗಳಿವೆ. ಧರ್ಮ, ಜಾತಿ ಆಧಾರಗಳ ಮೇಲೆ ಮೇಲು-ಕೀಳು ಸಲ್ಲದು. ಪ್ರತಿಯೊಂದು ಧರ್ಮವು ತನ್ನದೇ ಆದ ಸಂಸ್ಕøತಿ, ಪರಂಪರೆ, ಉತ್ಸವಗಳನ್ನು ಹೊಂದಿದೆ. ವಿವಿಧ ಧರ್ಮಗಳ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಪರಸ್ಪರ ಭಾಗವಹಿಸಿದರೆ ಪ್ರೀತಿ, ಸ್ನೇಹ, ಭಕ್ತಿ, ವಿಚಾರ ವಿನಿಮಯವಾಗುವ ಮೂಲಕ ಕೋಮು ಸಾಮರಸ್ಯ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಮುತುವಲ್ಲಿ ಹಜರತ್ ಮೌಲಾಲಿ ದರ್ಗದ ಮುಖ್ಯಸ್ಥ ಗುಲಾಮ ಗೌಸ್‍ಸಾಬ್ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಸಮೀಪವಿರುವ ಮುತುವಲ್ಲಿ ಹಜರತ್ ಮೌಲಾಲಿ ದರ್ಗದ 739ನೇ ಉರಸ್‍ಗೆ ಸೋಮವಾರ ಸಂಜೆ ಚಾಲನೆ ನೀಡಿ, ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವತಿಯಿಂದ ಸತ್ಕಾರ ಸ್ವೀಕರಿಸಿ ನಂತರ ಅವರು ಮಾತನಾಡಿದರು.
ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಈ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಜರತ್ ಮೌಲಾಲಿ ಅವರು ಸಮಾಜ ಸೇವಕರಾಗಿ, ಅನೇಕ ಭಕ್ತಾದಿಗಳ ಕಾಮಧೇನುವಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಕೂಡಾ ಇಸ್ಲಾಂ ಧರ್ಮಿಯರಲ್ಲದೇ ವಿವಿಧ ಧರ್ಮಗಳ ಭಕ್ತರು ಸಾಕಷ್ಟು ರೀತಿಯಲ್ಲಿ ದÀರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಸೂಫಿ ಸಂತ ಮೌಲಾಲಿ ಕೊಡುಗೆ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಈರಣ್ಣ ಜೋಳದ, ಜಯಶ್ರೀ ಎಸ್.ವಂಟಿ, ಸಾಯಿಪ್ರಸಾದ ಎಸ್.ವಂಟಿ, ಸುಜಯ್ ಎಸ್.ವಂಟಿ, ಮೊಯಿನೋದ್ದಿನ್ ಪಾಶಾ, ಇಲಿಯಾಸ್ ಗುಡುಸಾಬ್, ಮಹಲ್ ಮೌಲಾಸಾಬ್, ಶಿವಕುಮಾರ ಅವಸ್ತಿ, ಲಕ್ಷ್ಮಣ ಕಿಲಕಿಲೆ, ಶೇಖರೋಜಾದ ಆಫೀಜ್ ಮೊಹ್ಮದ್ ಫಕ್ರುದ್ದೀನ್ ಮಾನಿಹಾಳ್ ದರ್ಗಾ ಸಮಿತಿಯ ಸದಸ್ಯರು ಹಾಗೂ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.