ಸಾಧಕರಿಗೆ ಪ್ರೇರಣಾ ಶಕ್ತಿಯಾದ ಬಬಲಾದ ಮಠ

0
87

ಕಲಬುರಗಿ; ಪ್ರತಿಭಾವಂತ ಮಕ್ಕಳಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಧಕರಿಗೆ ವೇದಿಕೆ ನೀಡಿ ಬೆಳೆಸುತ್ತಿರುವ ಬಬಲಾದ ಮಠದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೀಟ ಶಾಸ್ತ್ರಜ್ಞರಾದ ಚಾಮರಾಜ ದೊಡ್ಮನಿ ಹೇಳಿದರು.

ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 190ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಆದರೆ ವೇದಿಕೆ, ಪ್ರೋತ್ಸಾಹಕ್ಕೆ ಕೊರತೆ ಇದೆ ಆದರೆ ನೂರಾರು ಜನರಿಗೆ ವೇದಿಕೆ ಕೊಡುವ ಮೂಲಕ ಬಬಲಾದ ಪೂಜ್ಯರು ಉತ್ತಮವಾದ ಕಾರ್ಯ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮನುಷ್ಯನು ಹಣ ಗಳಿಸುವುದಕ್ಕೆ ಹೆಚ್ಚು ಸಮಯ ನೀಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಮನುಷ್ಯನ ನಿರ್ಲಕ್ಷತೆಯಿಂದ ಹಲವಾರು ಕ್ರಿಮಿಗಳು ಉತ್ಪತ್ತಿಯಾಗಿ ರೋಗಗಳು ಹರಡುತ್ತಿವೆ. ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತರೋಗ ಬರದಂತೆ ಮುಂಜಾಗ್ರತೆ ವಹಿಸಿ ಜೀವನ ಸಾಗಿಸಬೇಕು. ಆರೋಗ್ಯವಂತ ಸಮಾಜ ನಿರ್ಮಿಸಲು ಹಲವಾರು ಸಲಹೆ ನೀಡಿದರು. ಮುಖ್ಯ ಅತಿಥಿಗಳಾದ ದಂತ ವೈದ್ಯರಾದ ಡಾ.ಪ್ರಜ್ಞಾ ವಿ ಜೋಷಿ ಹಲ್ಲುಗಳ ಸುರಕ್ಷತೆಯ ಬಗ್ಗೆ ಸಲಹೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಅದ್ಭುತ ನೃತ್ಯ ಮಾಡಿ ನೆರೆದವರನ್ನು ರಂಜಿಸಿದ ಐದು ವರ್ಷದ ಪುಟ್ಟ ಬಾಲಕನಾದ ಕು ಚನ್ನವೀರ ಎಂ ಕೊನೆಕ ಯಾದಗಿರ ಬಾಲ ಪ್ರತಿಭೆಗೆ ಮಠದ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಸಂಗಮೇಶ ನಾಗೂರ, ಮಾಣಿಕ ಮಿರ್ಕಲ, ಶರಣು ಮಾಲಿ ಪಾಟೀಲ ವರನಾಳ, ಗುರುರಾಜ ಹಸರಗುಂಡಗಿ, ಸಿದ್ದಣ್ಣಾ ವಾಡಿ, ಶೋಭಾ ಮಿರ್ಕಲ್, ಅನಿಲ ಕುಮಾರ ಮೇಳಕುಂದಿ, ಶರಣು ಪ್ಯಾಟಿ, ಶಿವಕುಮಾರ ಸಾವಳಗಿ ನಾಗಣ್ಣಾ ಚೆಂಗಟಿ, ವೆಂಕಟ ಜೋಶಿ ಸಲಗರ, ಚನ್ನವೀರ ಮಠಪತಿ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here