ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕಾಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

0
108

ಕಲಬುರಗಿ: ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ರಾಜ್ಯ ಸರಕಾರಕ್ಕೆ ಆಗ್ರಹಿಸಿದೆ

ಕಳೆದೆರಡು ದಿನಗಳ ಹಿಂದೆ ಶ್ರೀರಂಗ ಪಟ್ಟಣದಲ್ಲಿ ಒಂದು ಸಮಾವೇಶವನ್ನುದ್ದೇಶಿಸಿ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ನಿಂದಿಸಿ ಕೋಮು ಪ್ರಚೋದಕ ಹೇಳಿಕೆ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಈ ಹೇಳಿಕೆ ಅವರ ಕೀಳುತನದ ಮಟ್ವವನ್ನು ತೋರ್ಪಡಿಸುತ್ತದೆ ಇದು ಅತ್ಯಂತ ಖಂಡನೀಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯಾದರ್ಶಿ ಕೆ ನೀಲಾ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇದು ದಕ್ಷಿಣ ಕರ್ನಾಟಕದ ಮತ್ತು ಮೈಸೂರು ಭಾಗದಲ್ಲಿನ ಶಾಂತಿಯ ವಾತಾವರಣವನ್ನು ಕದಡಲು ವಹಿಸುತ್ತಿರುವ ಕೋಮುವಾದಿಗಳ ಸಂಚಿನ ಮುಂದುವರಿಕೆಯ ಭಾಗವಾಗಿದೆ ಎಂಬುದನ್ನು ಎಲ್ಲ ಪ್ರಗತಿಪರರು ಹಾಗೂ ಪ್ರಜಾಪ್ರಭುತ್ವವಾದಿಗಳು ಗಮನಿಸಬೇಕೆಂದು ತಿಳಿಸಿದರು.

ರಾಜ್ಯ ಸರಕಾರ ರಾಜ್ಯದ ಸೌಹಾರ್ಧತೆಗೆ ಗಂಭೀರ ಧಕ್ಕೆ ತರುತ್ತಿರುವ ಮತ್ತು ಅಲ್ಪಸಂಖ್ಯಾತರನ್ನು ಅವಾಚ್ಯವಾಗಿ ನಿಂದಿಸುತ್ತಿರುವ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡು ಎಂದು ಕಳವಳ ವ್ಯಕ್ತಪಡಿಸಿದರು.

ಸರಕಾರದ ದಿವ್ಯ ಮೌನವು ಇಂತಹ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಸಂಬಂಧಿಸಿ ಅದರ ಸಮ್ಮತಿಯಂತೆ ಕಂಡು ಬರುತ್ತಿದೆ ಎಂದು ಸರಕಾರದ ನಡೆಯನ್ನು ಕಟುವಾಗಿ ಟೀಕಿಸಿದೆ.

ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಪ್ರಕಾಶ, ಎಚ್ಚ ಆರ್ ನವಿನಕುಮಾರ, ಟಿ ಯಶ್ವಂತ, ಬಸವರಾಜ ಪೂಜಾರ, ಮುನಿ ವೆಂಕಟಪ್ಪಾ, ಎಂ ಬಿ ಸಜ್ಜನ, ಭಿಮಶೇಟ್ಟಿ ಯಂಪಳ್ಳಿ, ಗೌರಮ್ಮಾ ಪಿ ಪಾಟೀಲ್, ಶಾಂತಾ ಎನ್ ಘಂಟೆ, ಸುನಿಲ್ ಕುಮಾರ ಬಜಾಲ್, ಸುರೇಶ ಕಲ್ಲಾಗರ, ಮೀನಾಕ್ಷಿ ಬಾಳಿ, ಸಾಯಬಣ್ಣ ಗುಡುಬಾ, ಬಿ ಎಂ ಭಟ್, ಸಿ ಕುಮಾರಿ, ಪದ್ಮಿನಿ ಕಿರಣಗಿ, ಸಿದ್ದು ಹರವಾಳ, ಶ್ರೀಮಂತ ಬಿರಾದಾರ, ನಾಗಯ್ಯ ಸ್ವಾಮಿ, ಶರಣಬಸಪ್ಪಾ ಮಮಶೆಟ್ಟಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here