ಸಂವಿಧಾನ ದಿನಾಚರಣೆ

0
11

ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈಕೋರ್ಟ ನ್ಯಾಯವಾದಿಗಳು ಹಾಗೂ ಮಹಿಳಾ ಪರ ಚಿಂತಕರಾದ ಅಶ್ವಿನಿ ಮದನ್‍ಕರ್ ಅವರು ಸಂವಿಧನದ ಮಹತ್ವ ಮತ್ತು ಉದ್ದೇಶವನ್ನು ಸವಿಸ್ತಾರವಾಗಿ ಹೇಳಿದರು. ಸಂವಿಧಾನದ ಆಶಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ವರ ಏಳಿಗೆಗಾಗಿ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ ರವರು ಬರೆದಿದ್ದಾರೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವರಿ ಅವರು ವಹಿಸಿದ್ದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಸಲಗರ, ಡಾ.ದೌಲಪ್ಪ ಬಿ.ಹೆಚ್., ಡಾ.ಶಶಿಶೇಖರ ರೆಡ್ಡಿ, ಡಾ.ರಾಜಶೇಖರ ಮಡಿವಾಳ, ಡಾ.ಶ್ರೀಮಂತ ಹೋಳ್ಕರಮ ಡಾ.ಸುರೇಶ ಮಾಳೆಗಾಂವ್,ಡಾ.ಬಲಭೀಮ ಸಾಂಗ್ಲಿ, ಶ್ರೀ ಶಿವಾನಂದ ಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಧ್ಯಾಪಕರಾದ, ಡಾ.ನಾಗಪ್ಪ ಗೋಗಿ, ಡಾ.ಬಸಂತ ಸಾಗರ, ಡಾ.ರವಿ ಬೌದ್ದೆ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ಅನಿಲಕುಮಾರ ಹಾಲು, ಡಾ.ಶಶಿಕಾಂತ ಕೊಳ್ಳಿ, ಡಾ.ವಗ್ಗಿ, ಡಾ.ರಾಮಕೃಷ್ಣ, ಪ್ರೊ.ರೆಹಮಾನ ಮಹ್ಮದಸಾಬ, ಡಾ,ವಿಜಯಕುಮಾರ ಗೋಪಾಳೆ, ಡಾ.ವಿಜಯಾನಂದ ವಿಠಲ, ಪ್ರೊ.ಚನ್ನಕ್ಕಿ ನಾಗಪ್ಪ, ಪ್ರೊ.ಆನಂದ, ಡಾ.ರಾಬಿಯಾ ಇಫ್ಫತ್, ಡಾ.ಸುಜಾತಾ ದೊಡ್ಡಮನಿ, ಡಾ.ಭಾಗ್ಯಲಕ್ಷ್ಮಿ, ಡಾ.ಶಮಲಾ ಸ್ವಾಮಿ, ಡಾ.ಅನುಸೂಯಾ ಗಾಯಕವಾಡ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಅನುಸೂಯಾ ಗಾಯಕವಾಡ ಪ್ರಾರ್ಥಿಸಿದರು. ಪ್ರೊ.ಸುರೇಶ ಮಾಳೆಗಾಂವ್ ಸ್ವಾಗತಿಸಿದರು, ಡಾ.ಶ್ರೀಮಂತ ಹೋಳ್ಕರ ಪ್ರತಿಜ್ಞಾ ವಿಧಿ ಓದಿದರು, ಡಾ.ವಿಜಯಾನಂದ ವಂದಿಸಿದರು, ಡಾ.ಬಲಭೀಮ ಸಾಂಗ್ಲಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here