ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನಮ್ಮ ನಡೆ ಸಂವಿಧಾನದ ಕಡೆ ಹಕ್ಕು ಪತ್ರ ಹಾಗೂ ನೊಂದಣಿ ಖಾತ ಪ್ರತಿ ವಿತರಣೆ ಕಾರ್ಯಕ್ರಮದಲ್ಲಿ ಗಣ್ಯರು ಸಂವಿಧಾನ ಪೀಠಿಕೆಯನ್ನು ಓದಿದರು.
ಈ ಸಂದರ್ಭದಲ್ಲಿ ಎ. ನರಸಿಂಹಮೂರ್ತಿ, ಡಾ. ಐ.ಎಸ್. ವಿದ್ಯಾಸಾಗರ, ಶ್ರೀಧರ ಸಾರವಾಡ, ಮಲ್ದಾರ್ ಬಾಲು, ರಮೇಶ ಪಟ್ಟೇದಾರ, ಗೌರಮ್ಮ ಮಾಕಾ, ರೇಣುಕ ಸರಡಗಿ, ಶರಣು ಹಂಗರಗಿ, ಶರಣು ಹಂಗರಗಿ, ಶರಣು ಕಣ್ಣಿ ಸೇರಿದಂತೆ ಇತರರು ಇದ್ದರು.