ಕಲಬುರಗಿ: ಅಂಗವಿಕಲರಿಗೆ ನೀಡಲಾಗುತ್ತಿರುವ ಮಶಾಸನ ವೇತನವನ್ನು ರೂ. 6000ವರೆಗೆ ಹೆಚ್ಚಿಸಲು ಸರಕಾರಕ್ಕೆ ಶೀಫಾರಸು ಮಾಡಬೇಕೆಂದು ನ್ಯೂ ಲೈಫ್ ಅಂಗವಿಕಲರ ಮಹಿಳೆಯರ ಸಂಘ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರಿಗೆ ಮನವಿ ಪತ್ರ ಸಲ್ಲಿಸಿ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಬಧವಾರ ಶಾಸಕಿ ಕನೀಜ್ ಫಾತೀಮಾ ಅವರ ನಿವಾಸಕ್ಕೆ ನಿಯೋಗದ ಸದಸ್ಯರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇಲಾಖೆಯಿಂದ ಸಿಗುತ್ತಿರುವ ರೂ. 1400 ಮಶಾಸನ ವೇತನ ಯಾವುದಕ್ಕೂಸಾಲುತ್ತಿಲ್ಲ. ದಿನ ಬಳಕೆಯ ಸಮಾನುಗಳ ದರ ಏರಿಕೆಯಿಂದ ಅಂಗವಿಕಲರು ಇತರರ ಮೇಲೆ ಅವಲಂಭಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾಲಂಬನೆ ಮತ್ತು ಘನತೆಯಿಂದ ಬದುಕುಲ ಮಶಾಸನ ಕೇವಲ ಅನುಕಂಪಕ್ಕೆ ಸಿಮಿತಗೊಂಡಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು ಬೇಡಿಕೆಗಳು ಸರಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಪುತ್ರ ಯುವ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಸಂಘದ ಅಧ್ಯಕ್ಷರಾದ ಮಹೆಬೂಬ್ ಬಿ, ಉಪಾಧ್ಯಕ್ಷರಾದ ಶಕೀಲಾ, ಕಾರ್ಯದರ್ಶಿ ಶಮಿಮ್ ಬೇಗಂ ಸೇರಿದಂತೆ ಹಲವರು ಇದ್ದರು.