ಕಲಬುರಗಿ; ಸ್ಥಳೀಯ ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಬುಧವಾರ ಕಲಬುರಗಿ ಮಹಾನಗರ ಪಾಲಿಕೆ ಎದುರು ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷರಾದ ಪೃಥ್ವಿರಾಜ ಎಸ್. ರಾಂಪೂರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ವಾಣಿಜ್ಯ ಮಳಿಗೆಗಳು ಅಂಗಡಿ ಮುಗ್ಗಟ್ಟುಗಳು ಮತ್ತು ಶಾಲಾ ಕಾಲೇಜುಗಳ ನಾಮಫಲಕಗಳು ಆಂಗ್ಲಭಾಷೆಯಲ್ಲಿದ್ದು. ಕನ್ನಡಕ್ಕೆ ಅವಮಾನ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಸರ್ಕಾರದ ಸುತ್ತೋಲೆ ಈಗಾಗಲೇ ಮತ್ತೆ ಮುಖ್ಯಮಂತ್ರಿಗಳು ಕೂಡಾ ಕನ್ನಡದಲ್ಲಿ ನಾಮಫಲಕಗಳು ಶೇಕಡಾ 60% ರಷ್ಟು ಕನ್ನಡದಲ್ಲಿ ನಾಮಫಲಕಗಳು ಇರಬೇಕೆಂದು ಸೂಚಿಸಿದ್ದಾರೆ.
ಎಲ್ಲೆಂದರಲ್ಲಿ ನಗರದಲ್ಲಿ ಅಂಗಡಿ ಮುಗ್ಗಟ್ಟುಗಳು ಮತ್ತು ಶಾಲಾ ಕಾಲೇಜುಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಹಿಂದಿ ಇಂಗ್ಲೀಷ್ ಮತ್ತು ಇನ್ನಿತರ ಭಾಷೆಗಳಲ್ಲಿ ಅಂಗಡಿ ಮುಗ್ಗಟ್ಟು ಮತ್ತು ಶಾಲಾ ಕಾಲೇಜುಗಳಲ್ಲಿ ಅಳವಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಕನ್ನಡಕ್ಕೆ ಆದ್ಯತೆ ಕೊಟ್ಟು ಕನ್ನಡ ಭಾಷೆ ಶೇಕಡಾ 60% ರಷ್ಟು ಕನ್ನಡದಲ್ಲಿ ನಾಮಫಲಕಗಳು ಇರಬೇಕು ಎಂದು ಅಂಗಡಿ ಮುಗ್ಗಟ್ಟು ಮಾಲೀಕರಿಗೆ ನೋಟಿಸ್ ಕೊಡಬೇಕು ಇಲ್ಲವಾದರೆ ಅವರಿಗೆ ದಂಡ ಅಥವಾ ಇಲಾಖೆಯಿಂದ ಕೊಟ್ಟರುವ ಲೈಸೆನ್ಸ್ ರದ್ದು ಗೋಳಿಸಬೇಕು, ಎಲ್ಲಾ ಅಂಗಡಿ ಮುಗ್ಗಟ್ಟುಗಳ ಹಾಗೂ ಶಾಲಾ ಕಾಲೇಜುಗಳು ನಾಮಫಲಕಗಳು ಕನ್ನಡ ಭಾಷೆಯಲ್ಲಿ ಶೇಕಡಾ 60% ರಷ್ಟು ಇಂದಿಗೆ 15 ದಿನಗಳ ಒಳಗಡೆ ಅಳವಡಿಸಬೇಕು ಎಂದು ಆಗ್ರಹಿಸಿದರು.
ಅನ್ಯ ಭಾಷಿಗರು ನಮ್ಮ ಜನ್ಮಭೂಮಿಗೆ ಬರಲಿ ಅತಿಥಿಯಾಗಿ ಅಲ್ಲ. ಕನ್ನಡಿಗರಾಗಿ, ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ಕನ್ನಡದಲ್ಲಿ ವ್ಯವಹಾರ ಮಾಡಬೇಕು. ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಕನ್ನಡಕ್ಕೆ ಆದ್ಯತೆ ಕೊಡಬೇಕು. ಕನ್ನಡಿಗರಿಗೆ ಗೌರವ ಕೊಟ್ಟು ಕನ್ನಡದ ಭಾಷೆಯಲ್ಲಿ ವ್ಯವಹರಿಸಬೇಕು ಎಮದು ನಾವು ಕೇಳಿಕೊಳ್ಳುತ್ತವೆ. ಗಾಂಚಲಿ ಬೀಡಿ ಕನ್ನಡ ಮಾತನಾಡಿ, ಕನ್ನಡ ಬಳಸಿ. ಕನ್ನಡದಲ್ಲಿ ವ್ಯವಹರಿಸಿ ಕನ್ನಡಿಗರಿಗೆ ಗೌರವ ಕೊಡಿ. ಕನ್ನಡ ಉಳಿಸಿ. ಬೆಳೆಸಿ. ಹಾರೈಸಿ ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ, ಕನ್ನಡಿಗರಿಗೆ ಅದು ಉಸಿರು. ಕನ್ನಡ ಭಾಷೆಗೆ ಒಂದು ಶಕ್ತಿ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಎಸ್, ಶಂಕರ್ ದೊಡ್ಡಮನಿ, ಲಿಂಗರಾಜ ಆರ್. ಕೆ, ರಾಜು ಗುಂಟ್ರಾಳ, ನಾಗರಾಜ ಮ್ಯತ್ರಿ, ಗುರು ಎಸ್ ಬಂಗರಗಿ, ಮೋಹನ್ ಚಿಕ್ಮಟ್ಟಿ, ಮಲ್ಲೇಶ್ ವಾಡೇಕರ್, ಪ್ರಶಾಂತ್ ಸಣ್ಣೂರ್, ಸೈಬಣ್ಣ, ಮಲ್ಲಿಕಾರ್ಜುನ, ಲಕ್ಷ್ಮೀಕಾಂತ ಸೇರಿದಂತೆ ಇತರರು ಇದ್ದರು.