ನಾಯಿ ಹಾವಳಿ ತಪ್ಪಿಸಲು ಕ್ರಿಯಾಶೀಲರಾಗಿ; 477 ಪೌರ ಕಾರ್ಮಿರಕರ ಸೇವೆ ಕಾಯಂ ಮಾಡಿ | ಅಲ್ಲಂಪ್ರಭು ಪಾಟೀಲ್‌

0
103

ಕಲಬುರಗಿ; ನಗರದಲ್ಲಿ ಪಾಲಿಕೆಯ ಹಲವು ಹಂತದ ಅಧಿಕಾರಿಗಳ ಅಲಕ್ಷತನದಂದ ನಾಯಿ ಹಾವಳಿ ಶುರುವಾಗಿದೆ. ಇದು ಮಕ್ಕಳ ಪ್ರಾಣಕ್ಕೆ ಕಂಟಕವಾಗುತ್ತಿದೆ. ಮಿಸ್ಬಾ ನಗರದ ಬಾಲಕಿಗೆ ನಾಯಿ ಕಚ್ಚಿದ್ದರಿಂದ ಆಕೆ ಜೀವನ್ಮರಣ ಹೋರಾಟದಲ್ಲಿದ್ದಾಳೆ. ಇವೆಲ್ಲ ಪ್ರಸಂಗಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಈ ಸಮ್ಯೆಗೆ ಪರಿಹಾರ ಹುಡುಕುವಂತೆ ನಗರ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್‌ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಇಲ್ಲಿನ ಇಂದಿರಾ ಸ್ಮಾರಕ ಭವನ ಟೌನ್‌ಹಾಲ್‌ನಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ಹಳ್ಳಿಗಳಲ್ಲಿ ಹಂದಿ ಕಾಟ ಕಂಡರೆ, ನಗರಗಳಲ್ಲಿ ನಾಯಿ ಕಾಟ ಕಂಡಿದೆ. ಪಾಲಿಕೆಯವರು ಸರಿಯ.ಗಿ ಕಸ ವಿಲೇವಾರಿ ಮಾಡುತತಿಲ್ಲ. ಮಾಂಸ, ಎಲಬಿನ ಕಸ ನಾಯಿ ಹಾವಳಿಗೆ ಮೂಲ ಕಾರಣ. ಇದನ್ನೆಲ್ಲ ಸರಿಯಾಗಿ ವಿಲೇವಾರಿ ಮಾಡಿದರೆ ಹಾವಳಿ ತಪ್ಪುತ್ತದೆ. ನಾಯಿಗಳ ಜನನ ನಿಯಂತ್ರಣ, ರೇಬಿಸ್‌ ನಿಯಂತ್ರಣವೂ ಮಾಡಬೇಕಿದೆ. ಎಲ್ಲರೂ ಸೇರಿ ಕೆಲಸ ಶುರುಮಾಡಿ ನಗರವನ್ನು ನಾಯಿ ಹಾವಳಿಯಿಂದ ಮುಕ್ತವಾಗಿಸಿರಿ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆಯ 477 ಪೌರ ಕಾರ್ಮಿಕರ ಸೇವೆ ಖಾಯಂ ಕುರಿತು ಮಾತನಾಡಿದ ಶಾಸಕ ಅಲ್ಲಂಪ್ರಭು ಪಾಟೀಲರು
477 ದಿನಗೂಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲವೇ ಅವರ ಸೇವೆಯನ್ನು ಖಾಯಂಗೊಳಿಸುವ ಮೂಲಕ ನೇರ ಪಾವತಿ ಆಯ್ಕೆಗೊಳಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರದ ನಿಯಮಗಳು ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ವಹಿತಾಸಕ್ತಿ ಕಾಪಾಡಲು ಪೌರ ಕಾರ್ಮಿಕರಲ್ಲದವರನ್ನು ಆಯ್ಕೆಗೊಳಿಸಿ ತಾತ್ಕಾಲಿಕ ಖಾಯಂಮಾತಿ ಆಯ್ಕೆ ಪಟ್ಟಿಯಲ್ಲಿ ಅಂತಿಮಗೊಳಿಸಿದ್ದಾರೆ. ಅರ್ಹ ದಿನಗೂಲಿ ಕಾರ್ಮಿಕರು ಕಾಲ ಮಿತಿಯೊಳಗೆ ಜಿಲ್ಲಾಧಿಕಾರಿಗಳಿಗೆ ತಾತ್ಕಾಲಿಕ ನೇಮಕಾತಿ ಆಯ್ಕೆ ಪಟ್ಟಿಯ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ.

ಇದೆಲ್ಲದರ ಕುರಿತು ವಚಾರಣೆ ನಡೆದಿದೆ. ಅನೇಕ ಕ್ರಮಗಳಿಗೂ ಸೂಚನೆಗಳು ಹೊರಬಿದ್ದಿವೆ. ತಕ್ಕಂತಹ ಅಭ್ಯರ್ಥಿಗಳನ್ನು ಆಯ್ಕೆಗೊಳಿಸದೇ ಪೌರ ಕಾರ್ಮಿಕರಲ್ಲದವರಿಗೆ ಮತ್ತು ಉದ್ದೇಶಪೂರ್ವಕವಾಗಿ 35 ತಿಂಗಳು ನಿರಂತರ ದಿನಗೂಲಿ ನೌಕರರೆಂದು ನ್ಯಾಯಾಲಯದ ಆದೇಶದೊಂದಿಗೆ ದುಡಿಯುತ್ತಿರುವ ಅರ್ಹ ದಿನಗೂಲಿ ಪೌರ ಕಾರ್ಮಿಕರನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟಿದ್ದು ಸರಿಯಲ್ಲವೆಂದರು.

ಕೂಡಲೇ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿ, ದಿನಗೂಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ, ಖಾಯಂಮಾತಿ, ನೇರ ಪಾವತಿ ಮೂಲಕ ಆಯ್ಕೆಗೊಳಿಸುವಂತೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here