ಮೊಟ್ಟೆ ಸರಬರಾಜು ಮಾಡದೇ ಖೊಟ್ಟಿ ಬಿಲ್; ಕ್ರಮಕ್ಕೆ ಹರ್ಷಾನಂದ ಗುತ್ತೇದಾರ ಆಗ್ರಹ

0
175

ಆಳಂದ; ತಾಲೂಕಿನ 444 ಅಂಗನವಾಡಿ ಕೇಂದ್ರಗಳಿಗೆ 2023ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಂದ ಮೊಟ್ಟೆ ವಿತರಣೆ ಮಾಡಿರುವುದಿಲ್ಲ ಆದರೆ ಈಗ ಕೊಟ್ಟಿದ್ದೇವೆಂದು ಸಾಬೀತುಪಡಿಸಲು ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗೆ ಎರಡು ರೂಪಾಯಿಯಂತೆ ಮಾಡಿ ಹಣ ನೀಡಿ ಅಂಗನವಾಡಿ ಕೇಂದ್ರಗಳಿಂದ ರಸೀದಿ ಪಡೆಯುತ್ತಿದ್ದಾರೆ ಆದರೆ ರಸೀದಿಯು ಕಾರ್ಬನ್ ಕಾಫಿಯಲ್ಲಿ ಇರದೇ ಪೆನ್ನಿನಿಂದ ಬರೆದ ಕೈ ಬರಹದ ರಸೀದಿಯಲ್ಲಿ ಇದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪ ಮಾಡಿದ್ದಾರೆ.

ಈ ಕುರಿತು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ಆಳಂದ ತಾಲೂಕಿನ 444 ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ವಿತರಿಸುವ ಟೆಂಡರ್ ಬಾಗಲಕೋಟೆಯ ವಿ ಕೆ ರಂಗರೇಜ್ ಎನ್ನುವವರಿಗೆ ಸೇರಿರುತ್ತದೆ ಆದರೆ ಅವರು ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಶಿವುಕುಮಾರ ಜಮಾದಾರ ಅಲಿಯಾಸ್ ಪಿಂಟು ಜಮಾದಾರ ಅವರಿಗೆ ನಿರ್ವಹಿಸಿದ್ದಾರೆ. ಸದರಿ ಶಿವುಕುಮಾರ ಅವರು 2023ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಿಂದ ಮೊಟ್ಟೆ ವಿತರಿಸದೆ ಈಗ ಪ್ರತಿ ಮೊಟ್ಟೆಗೆ 2 ರೂ.ಯಂತೆ ಲೆಕ್ಕ ಮಾಡಿ ಅಂಗನವಾಡಿ ಕೇಂದ್ರಗಳಿಗೆ ನೀಡಿ ರಸೀದಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಇಲ್ಲಿಯವರೆಗೆ ಮೊಟ್ಟೆಯೆ ಪೂರೈಕೆ ಮಾಡಿಲ್ಲ ಆದರೂ ಶಾಸಕ ಬಿ ಆರ್ ಪಾಟೀಲ ಮತ್ತು ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಅಧಿಕಾರಿಗಳ ಮೇಲೆ ಒತ್ತಡ ತಂದು ಬಿಲ್ ಬರೆಯಿಸಿಕೊಂಡಿದ್ದಾರೆ. ಬಿಲ್ ಆದ ನಂತರ ತಮ್ಮ ಪಾಲು ಪಡೆಯಲು ಹವಣಿಸುತ್ತಿದ್ದಾರೆ. ಇಲ್ಲಿಯವರೆಗೆ ಮೊಟ್ಟೆ ವಿತರಿಸದೇ ಕೇವಲ ಸುಳ್ಳು ಲೆಕ್ಕ ಸೃಷ್ಟಿಸಿರುವ ವ್ಯಕ್ತಿಗಳ ಬಿಲ್ ಮಾಡಬಾರದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ತನಿಖೆ ಮಾಡಿ ಬೊಗಸ್ ಬಿಲ್ ತಯಾರಿಸಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆಳಂದ ತಾಲೂಕಿನ 444 ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ವಿತರಿಸುವ ಟೆಂಡರ್ ಪಡೆದಿರುವ ಬಾಗಲಕೋಟೆಯ ವಿ ಕೆ ರಂಗರೇಜ್ ಅವರ ಟೆಂಡರ್ ಏಜೆನ್ಸಿಯನ್ನು ರದ್ದುಪಡಿಸಿ ಅವರ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here