ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾಗಿ ರವೀಂದ್ರ ಗುರುನಾಥ ಧಾಕಪ್ಪ ನೇಮಕ

0
44

ಕಲಬುರಗಿ; ರವೀಂದ್ರ ಗುರುನಾಥ ಧಾಕಪ್ಪ ಇವರನ್ನು ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಕಲಬುರಗಿ ನಗರದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಸೂಕ್ತವಾದ ಸ್ಥಳಾವಕಾಶದ ಕೊರತೆ ಇದ್ದುದರಿಂದ, ಕಲಬುರಗಿ ಪೀಠವು ಇಲ್ಲಿಯವರೆಗೂ ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಕಛೇರಿಯಿಂದಲೇ ಕಾರ್ಯನಿರ್ವಹಿಸುತಿತ್ತು.

ಲೋಕೋಪಯೋಗಿ ಇಲಾಖೆ ಮತ್ತು ಕಲಬುರಗಿ ಜಿಲ್ಲಾಡಳಿತದ ಸಹಕಾರದಿಂದ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವನ್ನು ತಾತ್ಕಾಲಿಕವಾಗಿ ಕಲಬುರಗಿ ನಗರದ “ಮಹಾಲ್-ಎ-ಶಾಹೀ” ಅತಿಥಿ ಗೃಹ, ಸ್ಟೇಷನ್ ರಸ್ತೆ, ಕಲಬುರಗಿ ಕಟ್ಟಡದಲ್ಲಿ ಜನವರಿ 01 ರಿಂದ ಕಾರ್ಯನಿರ್ವಹಿಸಲು ಮಾನ್ಯ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಆದೇಶ ಹೊರಡಿಸಿರುತ್ತಾರೆ.

Contact Your\'s Advertisement; 9902492681

ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಜನವರಿ 1 ರಿಂದ ತಾತ್ಕಾಲಿಕವಾಗಿ ಕಲಬುರಗಿ ನಗರದ “ಮಹಾಲ್-ಎ-ಶಾಹೀ” ಅತಿಥಿ ಗೃಹ, ಸ್ಟೇಷನ್ ರಸ್ತೆ, ಕಲಬುರಗಿ ಕಟ್ಟಡದಿಂದ ಕಾರ್ಯನಿರ್ವಹಿಸುತ್ತದೆ. ಕಲಬುರಗಿ ಪೀಠದ ವಿಚಾರಣೆಗೆ ಹಾಜರಾಗುವ ಎಲ್ಲಾ ಅರ್ಜಿದಾರರು ಮತ್ತು ಪ್ರತಿವಾಧಿಗಳು ಇನ್ನು ಮುಂದೆ ಕಲಬುರಗಿ ನಗರದ ಕಲಬುರಗಿ ಪೀಠದಲ್ಲಿ ಹಾಜರಾಗುವುದು.

ಕಲಬುರಗಿ ವಿಭಾಗದ ವ್ಯಾಪ್ತಿಗೆ ಒಳಪಡುವ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಅರ್ಜಿದಾರರು ಮಾಹಿತಿ ಹಕ್ಕು ಅಧಿನಿಯಮ – 2005 ಕಲಂ 19(3) ರಡಿ ಸಲ್ಲಿಸುವ ದ್ವಿತೀಯ ಮೇಲ್ಮನವಿ ಮತ್ತು ಕಲಂ 18(1) ರಡಿ ಸಲ್ಲಿಸುವ ದೂರು ಅರ್ಜಿಗಳನ್ನು ಇಲ್ಲಿಯವರೆಗೂ ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಕಛೇರಿಗೆ ಸಲ್ಲಿಸುತ್ತಿದ್ದು, ಈಗಲೂ ಸಹಾ ತಮ್ಮ ಅರ್ಜಿಗಳನ್ನು ತಾತ್ಕಾಲಿಕವಾಗಿ ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಕಛೇರಿಗೆ ಭೌತಿಕವಾಗಿ ಅಥವಾ ಆನ್‍ಲೈನ್ ಮೂಲಕ ಸಲ್ಲಿಸಲು ತಿಳಿಸಿದೆ ಎಂದು ಕನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಎ.ಬಿ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here