ರಾಷ್ಟ್ರೀಯ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕಲಬುರಗಿಯ ಶ್ರೇಯಾ ಆಯ್ಜೆ

0
18

ಕಲಬುರಗಿ: ಪ್ರಪಥಮ ಬಾರಿಗೆ ಕಲ್ಯಾಣ ಕರ್ನಾಟಕ ಭಾಗದ ಯುವತಿ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಹ್ಯಾಂಡಬಾಲ್ ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಝಳಕಿ ಅವರು ಹರ್ಷ ವ್ಯಕ್ತಪಡಿಸಿದರು.

ಚಂದ್ರಕಾಂತ ಪಾಟೀಲ ಕ್ರೀಡಾಂಗಣದಲ್ಲಿ ಗುಲಬರ್ಗಾ ಜಿಲ್ಲಾ ಹ್ಯಾಂಡಬಾಲ್ ಅಸೋಸಿಯೇಷನ್ ಅಡಿಯಲ್ಲಿ ತರಬೇತಿ ಪಡೆದ ಐವರು ಬಾಲಕರು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಎರಡನೇ ಹ್ಯಾಂಡಬಾಲ್ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಇದೀಗ ಅಸೋಸಿಯೇಷನ್ ಅಡಿಯಲ್ಲಿ ತರಬೇತಿ ಪಡೆದ ಇನ್ನೊರ್ವ ವಿದ್ಯಾರ್ಥಿನಿ ಶ್ರೇಯಾ ಎಂಬುವವರು ಜನವರಿ 05ರಿಂದ 09ರ ವರೆಗೆ ಹರಿಯಾಣದಲ್ಲಿ ನಡೆಯಲಿರುವ 67ನೇ ರಾಷ್ಟೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿ ಆಯ್ಕೆಯಾದ ಕಲ್ಯಾಣ ಕರ್ನಾಟಕ ಭಾಗದ ಮೊದಲ ಕ್ರೀಡಾಪಟುವಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಓಲಂಪಿಕ್ ಅಸೋಸಿಯೇಷನ್ ನ ಅಶೋಕ ಕುಮಾರ್ ನಿಂಬೂರ್, ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ದತ್ತಾತ್ರೇಯ ಜೇವರ್ಗಿ, ಓಲಂಪಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಪ್ರವಿಣಕುಮಾರ್ ಪುಣೆ ಕ್ರೀಡಾಪಟುಗಳಾದ ಶೇಕ್ ಸೋಪಿಯಾನ್, ಸನಫ್, ಮೋಹಿತ್, ಕುನಾಲ್ ಜಾಜಿ, ರಾಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here