ಸ್ವಾಮಿ ವಿವೇಕಾನಂದರು ವಿಶ್ವದ ಆಧ್ಯಾತ್ಮಿಕ ನಾಯಕರು: ವಿ.ಟಿ ಕಾಂಬಳೆ

0
76

ಕಲಬುರಗಿ: ಸ್ವಾಮಿ ವಿವೇಕಾನಂದರು ವಿಶ್ವದ ಆಧ್ಯಾತ್ಮಿಕ ನಾಯಕರು. ಶ್ರೇಷ್ಠ ಸಾಧಕರಲ್ಲಿ ಅವರು ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ಪಶ್ಚಿಮ ರಾಷ್ಟ್ರದ ದೇಶಗಳಿಗೆ ಪರಿಣಾಮಕಾರಿಯಾಗಿ ಅಧ್ಯಾತ್ಮ ಜ್ಞಾನ ಹಂಚಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಹೀಗಾಗಿ ಪಶ್ಚಿಮ ರಾಷ್ಟ್ರಗಳು ಆಧ್ಯಾತ್ಮದಲ್ಲಿ ಭಾರತದಿಂದಲೇ ಪ್ರಭಾವಿತರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ವಿ.ಟಿ ಕಾಂಬಳೆ ಹೇಳಿದರು.

ಬೆಂಗಳೂರಿನ ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ ದ ವತಿಯಿಂದ ಕಲ್ಬುರ್ಗಿಯ ಮಾನ್ಯವರ್ ದಾದಾಸಾಹೇಬ ಕಾನ್ಸಿರಾಮ್ ಪದವಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜರುಗಿದ “ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ” 1893 ಸೆಪ್ಟೆಂಬರ್ 11ರ ಸ್ವಾಮಿ ವಿವೇಕಾನಂದರು ಮಾಡಿದ ಚಿಕಾಗೋ ಭಾಷಣದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕಾಂಗ್ರೆಸ್ ಮುಖಂಡ ವಿ ಟಿ ಕಾಂಬಳೆ ಅವರು, ಸ್ವಾಮಿ ವಿವೇಕಾನಂದರ ಆದರ್ಶ ವಿಚಾರಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಚಿಕಾಗೋ ಭಾಷಣದಲ್ಲಿ ವಿವೇಕಾನಂದರು, “ಅಮೆರಿಕದ ಸಹೋದರಿಯರೇ ಮತ್ತು ಸಹೋದರರೇ”ಎಂದಾಗ ಇಡೀ ಸಭೆ ಚಪ್ಪಾಳೆಯ ಮೂಲಕ ಕರಾಡತನ ಹಾಗೂ ಭಾತೃತ್ವದ ಭಾವವನ್ನು ವ್ಯಕ್ತಪಡಿಸಿತು.

ಅಂತಹ ತೇಜಸ್ವಿ ಸಾಧಕ ಸಂತರಿಂದಲೇ ಈ ನುಡಿಗಳು ಪ್ರಭಾವಗೊಳ್ಳುತ್ತವೆ ಎನ್ನುವುದು ಸತ್ಯವಾಗಿದೆ. ಈ ಭಾವನೆಯನ್ನು ವಿದ್ಯಾರ್ಥಿಗಳು ಅರಿತುಕೊಂಡು ತಮ್ಮ ಜೀವನದಲ್ಲಿ ಶ್ರೇಷ್ಠ ವ್ಯಕ್ತಿತ್ವವನ್ನು ತಂದುಕೊಳ್ಳಲು ವಿವೇಕಾನಂದರ ಅಧ್ಯಯನ ಮಾತ್ರದಿಂದ ಸಾಧ್ಯ. ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ಧಾರೆ ಎರೆದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ವಿಭಾಗಿಯ ಸಂಚಾಲಕರಾದ ಡಾ. ಗಾಂಧೀಜಿ ಮೊಳಕೆರ, ಮಾನವ ಧರ್ಮವೇ ಶ್ರೇಷ್ಠ ಧರ್ಮ ಎಂದು ವಿವೇಕಾನಂದರು ಸಾರಿದರು. ಇಡೀ ಭಾರತವನ್ನು ಐದು ಬಾರಿ ಸಂಚಾರ ಮಾಡಿ ಜನರಲ್ಲಿದ್ದ ಅಂಧ ಶ್ರದ್ದೆ ನಿವಾರಿಸಿ ಸಮ ಸಮಾಜ ನಿರ್ಮಿಸಲು ಹಗಲಿರುಳು ಶ್ರಮ ವಹಿಸಿದರು. 1893 ರ ಚಿಕಾಗೋ ಭಾಷಣ ಸದಾ ಪ್ರೇರಣೆಯ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿತಾ ವಿ ಕಾಂಬಳೆ, ಪ್ರೊ ಪಿ ಚಂದ್ರಶೇಖರ್, ನವರಂಗ, ಡಾಕ್ಟರ್ ರಾಜಕುಮಾರ್ ಮಾಳಗೆ, ಡಾಕ್ಟರ್ ಗವಿಸಿದ್ದಪ್ಪ ಪಾಟೀಲ್, ಡಾಕ್ಟರ್ ಗಾಂಧೀಜಿ ಮೊಳಕೆರ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here