ಕಲಬುರಗಿ: ಮನುಷ್ಯನ ನಿಜವಾದ ಸಂಪತ್ತು ಎಂದರೆ ಮಾನಸಿಕವಾಗಿ ನೆಮ್ಮದಿಯಿಂದ ಇರಬೇಕು.ಒತ್ತಡ ಜೀವನ ಮಾನಸಿಕ ಆರೋಗ್ಯ ಹಾಳುಗೆಡವಲು ಕಾರಣವಾಗುತ್ತದೆ ಎಂದು ಸಾಹಿತಿ,ಚಿಂತಕ ಜಿ.ಜಿ.ವಣಿಕ್ಯಾಳ ತಿಳಿಸಿದರು.
ಜಯನಗರ ಶಿವಮಂದಿರದಲ್ಲಿ ಸೋಮವಾರ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಹೊಸ ವರ್ಷದ ಹೊಸ ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಜೀವನ ಒಂದು ಯಂತ್ರದಂತೆ.ಮನುಷ್ಯ ಆಸೆಯ ಬೆನ್ನು ಹತ್ತಿ ಇರುವ ಜೀವನವನ್ನು ಸಂತೋಷದಿಂದ ಸಾಗಿಸುತ್ತಿಲ್ಲ.ದೈಹಿಕ ಶ್ರಮ ಕಡಿಮೆಯಾಗಿ ಯಂತ್ರಗಳ ಮೊರೆ ಹೋಗಿದ್ಧಾನೆ. ಆರೋಗ್ಯದಿಂದರಲು ಹೇಗೆ ಸಾಧ್ಯ ಎಂದ ಅವರು ನೂತನ ವರ್ಷವು ಎಲ್ಲರ ಬಾಳಲ್ಲಿ ಬೆಳಕು ತರಲಿ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಕೇವಲ ಗೋಡೆಯ ಮೇಲಿನ ಕ್ಯಾಲೆಂಡರ್ ಬದಲಾದರೆ ಸಾಲದು.ನಮ್ಮ ಜೀವನ ಶೈಲಿ ಬದಲಾಗಬೇಕು.ಪರೋಪಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಎಂ. ಡಿ.ಮಠಪತಿ ಮಾತನಾಡಿದರು. ಉಪಾಧ್ಯಕ್ಷ ವೀರೇಶ ದಂಡೋತಿ, ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸದಸ್ಯರಾದ ಎಸ್.ಡಿ.ಸೇಡಂಕರ, ಭೀಮಾಶಂಕರ ಶೆಟ್ಟಿ, ಬಸವರಾಜ ಪುರ್ಮಾ, ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ವೀರಪ್ಪ ಹುಡುಗಿ, ಮಧುಸೂದನ ಕುಲಕರ್ಣಿ.ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಪ್ರಧಾನ ಕಾರ್ಯದರ್ಶಿ ಸುಷ್ಮಾ ಮಾಗಿ, ಕಾರ್ಯದರ್ಶಿ ಸುರೇಖಾ ಬಾಲಕೊಂದೆ, ಸಹ ಕಾರ್ಯದರ್ಶಿ ಲತಾ ತುಪ್ಪದ, ವಿಜಯಾ ದಂಡೋತಿ, ಗೀತಾ ಲಿಂಗರಾಜ ಸಿರಗಾಪೂರ , ವಿಜಯಲಕ್ಷ್ಮಿ ಪುರ್ಮಾ ಸೇರಿದಂತೆ ಬಡಾವಣೆಯ ಹಿರಿಯರು ಹಾಗೂ ಮಹಿಳೆಯರು ಇದ್ದರು.