ಸುರಪುರ: ತಾಲ್ಲೂಕು ಕಾರ್ಮಿಕರ ಸೇವಾ ಸೌಲಭ್ಯ ಕೇಂದ್ರವನ್ನು ನಗರದ ರಂಗಂಪೇಟೆಯ ಮರಗಮ್ಮ ದೇವಸ್ಥಾನದ ಹತ್ತಿರ ನಗರಸಭೆ ಸದಸ್ಯ ವೇಣುಮಾಧವ ನಾಯಕ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕೇಂದ್ರ ಉದ್ಘಾಟಿಸಿ ಮಾತನಾಡಿ,ಕಾರ್ಮಿಕರಿಗಾಗಿ ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತದೆ.ಇದರ ಬಗ್ಗೆ ಹೆಚ್ಚಿನ ಕಾರ್ಮಿಕರಿಗೆ ಮಾಹಿತಿ ಇರುವುದಿಲ್ಲ.ಆದ್ದರಿಂದ ನಿಜವಾದ ಕಾರ್ಮಿಕರು ಈ ಕೇಂದ್ರದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಿ ಹಾಗು ಇತರೆ ಕಾರ್ಮಿಕರಿಗು ತಿಳಿಸುವಂತೆ ಕರೆ ನೀಡಿದರು.
ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೊಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಮಾತನಾಡಿ,ಕಟ್ಟಡ ಕಾರ್ಮಿಕರೆಂದರೆ ಕೇವಲ ಕಟ್ಟಡ ಕಟ್ಟುವವರು ಮಾತ್ರವಲ್ಲ.ಜೊತೆಗೆ ಬಡಿಗ,ಪ್ಲಂಬರ್,ಪೇಂಟರ್,ಬಂಡೆ ಹಾಸುವವರು,ವಿದ್ಯೂತ್ ಕೆಲಸ ಮಾಡುವ ಎಲ್ಲರೂ ಕೂಡ ಇದರಡಿಯಲ್ಲಿದ್ದು.ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ತಮ್ಮ ಹೆಷರನ್ನು ನೊಂದಾಯಿಸಿಕೊಂಡು ಸೌಲಭ್ಯಗಳನ್ನು ಪಡೆಯಬಹದು.ಒಂದು ವೇಳೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.ಬಾಲಕಾರ್ಮಿಕರ ಕೆಲಸಕ್ಕೆ ಪಡೆದಿದ್ದಲ್ಲಿ ಅಂತವರಿಗೆ ಇಪ್ಪತ್ತು ಸಾವಿರದಿಂದ ಐವತ್ತು ಸಾವಿರ ವರೆಗೆ ದಂಡ ಮತ್ತು ಜೈಲು ಶಿಕ್ಷೆ ಕೂಡ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಇಲಾಖೆ ನಿರೀಕ್ಷಕ ಶಿವಶಂಕರ ತಳವಾರ ಮಾತನಾಡಿ,ಅಂಬೇಡ್ಕರ ಸಹಾಯಸ್ತ ಯೋಜನೆಯಲ್ಲಿ ಅನೇಕ ಸೌಲಬ್ಯಗಳಿವೆ. ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಗುರುತಿನ ಚೀಟಿ ಹೊಂದಿರುವವರಿಗೆ ಸರಕಾರದಿಂದ ಅವರ ಕಸುಬಿಗೆ ಬೇಕಾಗುವ ಸಾಮಗ್ರಗಳ ಖರೀದಿಗೆ ಧನ ಸಹಾಯವಿದೆ.ಮಕ್ಕಳ ವಿದ್ಯಾಭ್ಯಾಸಕ್ಕೆ,ಮದುವೆಗೆ,ಮನೆ ಕಟ್ಟಿಸಲು ಸೇರಿದಂತೆ ಅನೇಕ ಸೌಲಭ್ಯಗಳಿದ್ದು,ಎಲ್ಲಾ ಕಾರ್ಮಿಕರು ಇಲಾಖೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಣಮಂತ ದೇವತ್ಕಲ್,ಹೋರಾಟಗಾರರಾದ ವೆಂಕೋಬ ದೊರೆ,ಉಸ್ತಾದ ವಜಾಹತ್ ಹುಸೇನ,ಭೀಮಾಶಂಕರ ಬಿಲ್ಲವ್,ಕಾರ್ಮಿಕ ಇಲಾಖೆಯ ಲಾಲಸಾಬ್ ಚೌದರಿ,ಚೆನ್ನಪ್ಪ ಎಲಿಗಾರ ಇದ್ದರು.
ಶಾಂತಗೌಡ ಪಾಟೀಲ ನಿರೂಪಿಸಿದರು,ರಾಜು ಕಲಾಲ್ ವಂದಿಸಿದರು.ಕಾರ್ಮಿಕರಾದ ಬಸವರಾಜ ಪೂಜಾರಿ,ಶಾಂತಗೌಡ ನಾಗರಾಳ,ರಮೇಶ ಹಗರಟಿಗಿ,ಮಲ್ಲು ವಿಷ್ಣು ಸೇನಾ,ವೀರಭದ್ರ ಕುಂಬಾರ,ಪ್ರಶಾಂತ ಹೆಡಗಿನಾಳ,ಕಾಂತು ಎಲಿಗಾರ,ಗೋವಿಂದರಾಜ ಶಹಾಪುರಕರ್,ನಾಗರಾಜ ವಡ್ಡರ,ಶ್ರೀನಿನಾಸ ಯಾದವ ಸೇರಿದಂತೆ ಅನೇಕರಿದ್ದರು.