ಕಲಬುರಗಿ; ನಾಗರಿಕ ಸಮಾಜ ತಲೆ ತಗ್ಗಿಸುವ ಬೆಳಗಾವಿ ಜಿಲ್ಲೆಯ ಹೊಸವಂಟಮುರಿ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಮಹಿಳೆಯೊಬ್ಬರನ್ನು ಅರೆ ಬೆತ್ತಲೆಗೊಳಿಸಿ ಎಳೆದಾಡಿ ಹಲ್ಲೆ ಮಾಡಿರುವುದು ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ತೀವ್ರವಾಗಿ ಖಂಡಿಸಿದ್ದಾರೆ.
ಆಸ್ತಿಯ ವ್ಯಾಜ್ಯದ ತೀರ್ಪು ಮಹಿಳೆಯ ಪರವಾಗಿ ಬಂದ ಕಾರಣ ಇದರಿಂದ ಆರೋಪಿಗಳು ಅಸಮಾಧಾನಗೊಂಡು ಇಂಥಹ ಹೀನ ಕೃತ್ಯ ಗ್ರಾಮ ಪಂಚಾಯತಿ ಕಚೇರಿಯಲ್ಲಿಯೆ ಈ ಘಟನೆ ನಡೆದಿರುವುದು ಮಹಿಳಾ ಕುಲಕ್ಕೆ ಅವಮಾನ ವೇಸಗಿದಂತಾಗಿದೆ. 20 ಜನ ಸೇರಿ ಕಾನೂನು ಕೈಗೆತ್ತಿಕೊಂಡು ಮಹಿಳೆಗೆ ಅರೆಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಜನರಿಗೆ ಕಾನೂನಿನ ಭಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಅಂದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ನೊಂದ ಮಹಿಳೆಗೆ ಪರಿಹಾರ ಧನ ನೀಡಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು. ಇಂತಹ ಘಟನೆಗಳು ಮತ್ತೊಮ್ಮೆ ಆಗದಂತೆ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಬೇಕು ಅಲ್ಲದೆ ಹೆಚ್ಚಿನ ನಿಗಾ ಸರಕಾರ ವಹಿಸಬೇಕೆಂದು ಹೇಳಿದರು