ಡಾ. ಭಕ್ತ ಕುಂಬಾರಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ

0
19

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆಯ ಸಾರಥ್ಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಅಭಿಮಾನಿಗಳ ಉತ್ಸವ ಸಮಾರಂಭದಲ್ಲಿ ಕನ್ನಡ ನಾಡಿನ ಹೆಸರಾಂತ ಸೆಲೆಬ್ರಿಟಿ ಆಂಕರ್ ಎಂದೆ ಹೆಸರಾದ ಡಾ: ಎಸ್.ಎಮ್.ಭಕ್ತ ಕುಂಬಾರ ರವರಿಗೆ “ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಕವಿ ಕಲಾವಿದರನ್ನು ಗುರುತಿಸಿ ಗೌರವ ಪುರಸ್ಕಾರ ನೀಡುವುದರಿಂದ ಕಲೆ ಸಾಹಿತ್ಯ ಸಂಸ್ಕøತಿ ಬೆಳೆಯುತ್ತದೆ ಹಾಗೆ ನಾವು ಕಂಡಂತೆ ಒಂದು ದಶಕದಿಂದ ಅನೇಕ ಹೊರ ರಾಜ್ಯಗಳಲ್ಲಿ ಕೂಡ ಕನ್ನಡ ತಾಯಿಯ ಸೇವೆಯ ಜೊತೆ ಜೊತೆಗೆ ಜನಪದ ಯಕ್ಷಣಿ ಪ್ರದರ್ಶನ, ನಿರೂಪಣೆಯ ನುಡಿ ನೈವೇದ್ಯದ ಮೂಲಕ ಸಮಾಜಕ್ಕೆ ಸುಂದರ ಸಂದೇಶಗಳನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ ಡಾ|| ಭಕ್ತ ಕುಂಬಾರ ರವರು ಎಂದು ಪಾಳಾದ ಪೂಜ್ಯ ಶ್ರೀ ಷ.ಬ್ರ.ಡಾ.ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹರುಶ ವ್ಯಕ್ತ ಪಡಿಸಿ ತಮ್ಮ ಆಶಿರ್ವಚನ ನಿಡಿದರು.

Contact Your\'s Advertisement; 9902492681

ಇದೆ ವೇಳೆ ಕನ್ನಡ ಸಾಹಿತ್ಯ ಪರಿಷತನ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೆಗಲತಿಪ್ಪಿ, ಶರಣು ಪಾಟೀಲ, ಚಂದ್ರಿಕಾ ಪರಮೇಶ್ವರ್, ಗರುಡ ಪುರಾಣ ಚಲನ ಚಿತ್ರದ ನಟ ಮಂಜುನಾಥ ನಾಗಬಾ ಹಾಗೂ ನಟಿ ದೀಶಾ ಶಟ್ಟಿ ಬೆಂಗಳೂರು, ಮಾನಸಿಂಗ್ ಚವ್ಹಾಣ, ಅಭಿಷೇಕ ಬಾಲಾಜಿ, ಗೋಪಾಲ ನಾಟಿಕರ, ಮನೋಹರ ಬಿರನೂರು, ಮಂಜು ಕುಸನೂರ, ಸಂತೋಷ್ ಚೌದರಿ, ವಿಜಯಕುಮಾರ್ ಅಂಕಲಗಿ, ನಾಗರಾಜ್ ಧಮ್ಮೂರ ಸೆರಿದಂತೆ ಅನೇಕ ಗಣ್ಯರು ಸೆರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here