ಸ್ವಯಂ ಸೇವಾ ಮನೋಭಾವನೆಯಿಂದ ಉತ್ತಮ ಸಮಾಜ ನಿರ್ಮಾಣ

0
84

ಕಲಬುರಗಿ: ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ ದೇಶ, ಸಮಾಜ ನಮಗೇನು ನೀಡಿದೆ ಎಂದು ಪ್ರಶ್ನಿಸಿದರು, ದೇಶ, ಸಮಾಜಕ್ಕೆ ನಾವೇನು ??ಮಾಡಿದ್ದೇವೆ ಎಂಬುದು ಪ್ರಮುಖವಾಗಿದೆ. ಯಾವದೇ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಜೀವನಕ್ಕಾಗಿ ಮೀಸಲಾದರೆ ಯಾವುದೇ ಪ್ರಯೋಜನವಿಲ್ಲ.

ವೃತ್ತಿಯ ಜೊತೆಗೆ ಸಮಾಜ ಸೇವೆಯು ಮುಖ್ಯ. ಸೇವೆಯು ನಮ್ಮನ್ನು ಸದಾ ಕಾಪಾಡುತ್ತದೆ. ವೈಯಕ್ತಿಕ ಜೀವನದ ಜೊತೆಗೆ ಸಮಾಜದ ಒಳಿತಿಗಾಗಿ ತನ್ನಿಂದಾದ ಏನಾದರು ಒಳಿತು ಮಾಡುವುದು, ಸ್ವಯಂ ಸೇವೆ ಸಲ್ಲಿಸುವ ಮನೋಭಾವನೆಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಈಗಾಗಲೇ ಅನೇಕ ಕಡೆಯಲ್ಲೂ ಈ ಉಚಿತ ಕ್ಷೌರ ಸೇವೆ ಇಲ್ಲಿಯವರೆಗೆ 1285ಕ್ಕೊ ಹೆಚ್ಚು ಅನಾಥರಿಗೆ ನಿರ್ಗತಿಕರಿಗೆ. ಅನಾಥಾಶ್ರಮದಲ್ಲಿ ಬುದ್ದಿ ಮಾದ್ಯರಿಗೆ. ಪೌರಕಾರ್ಮಿಕರಿಗೆ, ಅನಾಥ ಮಕ್ಕಳಿಗೆ. ಅಂಧರಿಗೆ. ಅಂಗವಿಕಲರಿಗೆ. ಹಿರಿಯ ವೃದ್ದರಿಗೆ. ಕಟ್ಟಡ ಕಾರ್ಮಿಕರಿಗೆ. ಮೂಕರಿಗೆ. ಹಾಗೂ ಶಾಲಾ ಮಕ್ಕಳಿಗೆ ಈ ಸೇವೆ ಸಲ್ಲಿಸಿದ್ದೇವೆ ಎಂದು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಹೇಳಿದರು.

Contact Your\'s Advertisement; 9902492681

ಶ್ರೀ ಭೋಜಲಿಂಗೇಶ್ವರರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕೇಂದ್ರದಲ್ಲಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಭೋಜಲಿಂಗೇಶ್ವರರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತ ನವರ ಸುಪುತ್ರರಾದ ಪರಮ ಪೂಜ್ಯ ಶ್ರೀ ಡಾ. ಕುಮಾರ್ ಭೋಜರಾಜನ 28 ನೇ ವರ್ಷದ ಜನ್ಮ ದಿನದ ನಿಮಿತ್ತ ವಾಗಿ ಶ್ರೀ ಭೋಜಲಿಂಗೇಶ್ವರರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 106 ಕ್ಕೊ ಹೆಚ್ಚು ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಏರ್ಪಡಿಸಿದ್ದರು. “ಜನ್ಮ ದಿನದ ಆಚರಣೆ ಸಂಧರ್ಭದಲ್ಲಿ’ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಅವರು ಯಾರು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಾರೆಯೋ, ಅಂತಹ ಸಮಾಜ ಸೇವಕ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಪೆÇ್ರೀತ್ಸಾಹ ನೀಡಿದರೆ ಹೆಚ್ಚಿನ ಮಟ್ಟದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಕಲರಿಗೊ ಲೇಸನ್ನೇ ಬಯಸಿದಾಗ ನಮ್ಮ ಜೀವನ ಸಾರ್ಥಕವೆನಿಸಿಕೊಳ್ಳುತ್ತದೆ ಎಂದು ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್ ಅವರು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವೆ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಶರಣರ ಹೆಸರಿನಲ್ಲಿ ಈ ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಮಾಜದ ಸಂಘಟನೆಯ ಜೊತೆ ಜೊತೆಗೆ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಘಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಗುರು ಶರಣ ಬಸಪ್ಪ ಕುಂಬಾರ ಡೋಣಗಾಂವ್, ಪ್ರಮುಖರಾದ ನಾಗೇಶ, ಶಿಕ್ಷಕ ಪಂಚಾಳ, ಕಾಳಿದಾಸ್ ಶಿಕ್ಷಕ, ಬಸವರಾಜ ಕುಂಬಾರ ಶಿಕ್ಷಕರು, ಸಿಂಧು ಮೇಡಂ ಕುರಾಳ, ಹಾಗೂ ಸಮಾಜದ ಗಣ್ಯರು ಶಹಾಬಾದ ತಾಲೂಕಿನ ಪ್ರಧಾನ ಕಾರ್ಯದರ್ಶಿ ಸಿದ್ರಾಮ ಹಡಪದ ಯಾಗಾಪೂರ, ಶಹಾಬಾದ ತಾಲೂಕಿನ ಉಪಾಧ್ಯಕ್ಷ ಶಿವಲಿಂಗ ಹಡಪದ ಸುಗೂರ ಎನ್. ಮತ್ತು ಶಿವಕುಮಾರ್ ಹಡಪದ ಮಾರಡಗಿ ಶಹಾಬಾದ, ಶಹಾಬಾದ ತಾಲೂಕಿನ ಸಂಘಟನಾ ಕಾರ್ಯದರ್ಶಿ ತೋಟೇಂದ್ರ ಶಹಾಬಾದ, ಹಾಗೂ ದತ್ತು ಹಡಪದ ನಾಲವಾರ, ವಿಶ್ವನಾಥ ಹಡಪದ ಸುಗೂರ ಎನ್. ಮತ್ತು ಸಂಗಮೇಶ ಹಡಪದ ಮಾರಡಗಿ ಸೇರಿದಂತೆ ಶ್ರೀ ಭೋಜಲಿಂಗೇಶ್ವರರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here