ಭೀಮಾ ಕೋರೆಗಾಂವ್ ಚರಿತ್ರೆ ದಲಿತರ ಆತ್ಮಾಭಿಮಾನದ ಸಂಕೇತ

0
64

ಶಹಾಬಾದ: ಭೀಮಾ ಕೋರೆಗಾಂವ್ ಚರಿತ್ರೆ ಶೋಷಿತರು ಮತ್ತು ದಲಿತರ ಆತ್ಮಾಭಿಮಾನದ ಸಂಕೇತವಾಗಿದೆ ಎಂದು ದಲಿತ ಮುಖಂಡ ಸುರೇಶ ಮೆಂಗನ್ ಹೇಳಿದರು.

ಅವರು ನಗರದ ಅಂಬೇಡ್ಕರ್ ಪ್ರತಿಮೆಯ ಬಳಿ ದಲಿತ ಸಮುದಾಯದ ವತಿಯಿಂದ ಆಯೋಜಿಸಲಾದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಭೀಮ ಕೋರೆಗಾಂವ್ ಹೋರಾಟ ಒಂದು ಐತಿಹಾಸಿಕ ಘಟನೆ. ಮರಾಠರ ಪೇಶ್ವೆಗಳಿಂದ ನಿರಂತರ ತುಳಿತಕ್ಕೆ ಒಳಗಾದ ಮಹರ್ ಜನಾಂಗದ ಸೈನಿಕರು, ತಮ್ಮ ಜೀವವನ್ನು ಪಣಕಿಟ್ಟು,ಸ್ವಾಭಿಮಾನಿ ಹೋರಾಟ ನಡೆಸಿದ ಈ ಘಟನೆಯನ್ನು ಭಾರತದ ಯಾವ ಶೋಷಿತ ವರ್ಗವೂ ಮರೆಯುವಂತಿಲ್ಲ ದೇಶದಲ್ಲಿ ಭೂಮಿಗಾಗಿ, ಅಸ್ತಿತ್ವ ಉಳಿವಿಗಾಗಿ ಅನೇಕ ಯುದ್ಧಗಳು, ಹೋರಾಟಗಳು ನಡೆದಿವೆ. ಆದರೆ, ಸಾಮಾಜಿಕ ಅಸ್ಮಿತೆಗಾಗಿ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ಧ ಭೀಮಾ ಕೋರೆಗಾಂವ್ ಯುದ್ಧವಾಗಿದೆ ಎಂದರು.

ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ,ಈ ಭೀಮಾ ಕೋರೆಗಾಂವ್ ಚರಿತ್ರೆ ಇತಿಹಾಸದಲ್ಲಿ ಮುಚ್ಚಿ ಹೋಗಿತ್ತು. ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ಚರಿತ್ರೆಯನ್ನು ಮರು ಶೋಧಿಸಿ, 1926ನೇ ಇಸವಿಯಲ್ಲಿ ಮತ್ತೆ ಜೀವ ತಂದುಕೊಟ್ಟರು. ಅದರ ಬಗ್ಗೆ ಸಂಶೋಧನೆಗಳು ನಡೆದು ಪುಸ್ತಕಗಳನ್ನು ಬರೆದು ಹೊರತಂದು ಜಗತ್ತಿಗೆ ಇತಿಹಾಸಲ್ಲಿ ಹುದುಗಿ ಹೋಗಿದ್ದ ರೋಚಕ ಘಟನೆಯನ್ನು ತಿಳಿಸಲಾಯಿತು. ನಾವುಗಳು ಸ್ವಾಭಿಮಾನ ಮತ್ತು ವೀರ ಸಮುದಾಯದವರಾಗಿದ್ದು, ಅದನ್ನು ಅರಿತು ನಡೆಯುವ ಮೂಲಕ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ಕಳುಹಿಸುವ ಮೂಲಕ ಸಮಾಜದಲ್ಲಿ ಉತ್ತಮರೆನಿಸಿಕೊಳ್ಳೋಣ ಎಂದರು.

ಸಿದ್ರಾಮ ಉದಯಕರ್ ಮಾತನಾಡಿ, ದೇಶದಲ್ಲಿ ನಡೆದಿರುವ ಯಾವುದೇ ಯುದ್ಧಕ್ಕೂ ಭೀಮಾ ಕೋರೆಗಾಂವ್‍ಯುದ್ಧವನ್ನು ಹೋಲಿಸಲು ಸಾಧ್ಯವಿಲ್ಲ. ಭೂಮಿಯ ಮೇಲೆ ನಡೆಯುವ ವಿಸ್ಮಯಗಳಂತೆ ಈ ಯುದ್ಧವೂ ಒಂದು ವಿಸ್ಮಯವಾಗಿದೆ. ಸತತ 12 ಗಂಟೆಗಳ ಕಾಲ ನಡೆದ ಕದನದಲ್ಲಿ ಪೇಶ್ವೆಯ 30 ಸಾವಿರ ಸೈನಿಕರ ವಿರುದ್ಧ ಮಹಾರ್ ಸಮುದಾಯದ 500 ವೀರರು ನಾಗನಾಕನ ನೇತೃತ್ವದಲ್ಲಿ ಹೋರಾಡಿ ಗೆದ್ದರು.

ದಲಿತ ಮುಖಂಡರಾದ ಬಸವರಾಜ ಮಯೂರ, ಶಿವಲಿಂಗಪ್ಪ ಹೆಬ್ಬಾಳಕರ್, ಕರವೇ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹೈಯ್ಯಳಕರ್ ವೇದಿಕೆಯ ಮೇಲಿದ್ದರು. ಅಲ್ಲಮಪ್ರಭು ಮಸ್ಕಿ, ರಾಜು ಜಂಬಗಿ,ಮರಲಿಂಗ ಯಾದಗಿರಿ,ಅನೀಲ ಮೈನಾಳಕರ್, ಪೂಜಪ್ಪ ಮೇತ್ರೆ, ಶರಣು ನಾಟೇಕಾರ,ಶರಣು ಕೆಲ್ಲೂರ್,ಮೋಹನ ಪೋತನಕರ್,ಪರಶುರಾಮ ಚಲುವಾದಿ, ರಾಜು ನಾಟೇಕಾರ,ರಮೇಶ ಸಂಗೈ, ನಾಂಗೇಂದ್ರ ಪೂಜಾರಿ,ರಂಜಿತ್ ಕಾಂಬ್ಳೆ, ಮಹೇಶ ಕಾಂಬ್ಳೆ,ರಾಹುಲ್ ಚಲುವಾದಿ,ರಾಹುಲ ಯನಗುಂಟಿಕರ್,ಶಿವು ಸಿಂಘೆ,ಸುನೀಲ ದೊಡ್ಡಮನಿ,ಅಶೋಕ ಮೊಸಳಗಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here