ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 06 ರಿಂದ 08.ರ ವರೆಗೆ ಶ್ರೀ ಕ್ಷೇತ್ರ ಹುಣಸಿ ಹಡಗಿಲ್ ಗ್ರಾಮದಲ್ಲಿರುವ “1008 ಶ್ರೀ ಚಿಂತಾಮಣಿ ಪಾಶ್ರ್ವನಾಥ ಭಗವಾನ ಶ್ರೀ ಧರಣೀಂದ್ರ ಹಾಗೂ ಪದ್ಮಾವತಿದೇವಿ ದಿಗಂಬರ ಜೈನ ಅತಿಶಯ” ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗುವುದು.
ಶನಿವಾರ 06.ರಂದು ಬೆಳಿಗ್ಗೆ 8 ಗಂಟೆಗೆ ಮಂಗಲಾಚರಣ, ಬೆಳಿಗ್ಗೆ 10 ಗಂಟೆಗೆ ಮಂಗಲಘೋಷ ಶ್ರೀ ಜಿನರ ಅಭಿಷೇಕ ಮದ್ಯಾಹ್ನ 12.30ಕ್ಕೆ ಪದ್ಮಾವತಿ ದೇವಿಯ ಸಹಸ್ರನಾಮ ಕುಂಕುಮಾರ್ಚನೆ ಮದ್ಯಾಹ್ನ 2 ಗಂಟೆಗೆ ಮಹಾ ಪ್ರಸಾದ ಸಾಯಂಕಾಲ 6.30ಕ್ಕೆ ಶ್ರೀ ಅಲ್ಲಮಪ್ರಭು ದೇವಸ್ಥಾನ ಹು.ಹಡಗಿಲ ಪ್ರಮುಖರಾದ ಶ್ರೀ ಪೂಜ್ಯ ಗುಂಡೇರಾವ ಮುತ್ಯಾರವರಿಂದ ವಾರ್ಷಿಕೋತ್ಸವದ ದೀಪ ಪ್ರಜ್ವಲನೆ ಹಾಗೂ ರಾತ್ರಿ 8 ಗಂಟೆಗೆ ಧಾರ್ಮಿಕ ಭಜನೆ ಕೀರ್ತನೆ. ನಡೆಯುತದೆ.
ಭಾನುವಾರ 07.ರಂದು ಪ.ಪೂ.ಜಗದ್ಗುರು ಸ್ವಸ್ತಿ ಶ್ರೀ ಡಾ ದೇವೆಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಹೊಂಬುಜ ಜೈನ ಮಠ ರವರ ದಿವ್ಯಸಾನಿಧ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ಮಂಗಲಾಚರಣ, ಬೆಳಿಗ್ಗೆ 8.30ಕ್ಕೆ ಜೈನ ಧರ್ಮ ಧ್ವಜಾರೋಹಣ, ಬೆಳಿಗ್ಗೆ 9.30ಕ್ಕೆ ಕುಂಭ ಮೆರವಣಿಗೆ. ಬೆಳಿಗ್ಗೆ 10.30ಕ್ಕೆ ಮಹಾಸ್ವಾಮೀಜಿರವರಿಂದ ಧರ್ಮೊಪದೇಶ, 12.45ಕ್ಕೆ ಅಭಿಷೇಕ, ಮದ್ಯಾಹ್ನ 2 ಗಂಟೆಗೆ ಮಹಾಪ್ರಸಾದ 5 ಗಂಟೆಗೆ ಪಲ್ಲಕ್ಕಿ ಶೋಭಾಯಾತ್ರೆ ರಾತ್ರಿ 8 ಗಂಟೆಗೆ 1008 ಶ್ರೀ ಪಾಶ್ರ್ವನಾಥ ಭಗವಾನರ ತೊಟ್ಟಿಲು ಕಾರ್ಯಕ್ರಮ ಹಾಗೂ ಭಜನಾ ಸಾಂಸ್ಕøತಿಕ ಕಾರ್ಯಕ್ರಮಗಳು.
ಸೋಮವಾರ 08.ರಂದು ಬೆಳಿಗ್ಗೆ 8 ಗಂಟೆಗೆ ಮಂಗಲಾಚರಣ ಬೆಳಿಗ್ಗೆ 10 ಕ್ಕೆ ಮಂಗಲಘೋಷ ಸಹಿತ ಶ್ರೀ ಜಿನರ ಅಭಿಷೇಕ ಇವರುತ್ತದೆ ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದರ್ಶನ ಪಡೆದು ಪುನಿತರಾಗಬೇಕು ಎಂದು ಧರ್ಮದರ್ಶಿಗಳಾದ ರಮೇಶ ಬೆಳಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.