ವಿಕಲಚೇತರಿಗೆ ಲ್ಯಾಪ್ ಟಾಪ್, ದ್ವಿಚಕ್ರ ವಾಹನ ಸೇರಿದ 5 ಸೌಲಭ್ಯಗಳಿಗೆ ಅರ್ಜಿ ಆಹ್ವಾನ

0
459
ಸಂದರ್ಭಿಕ ಚಿತ್ರ

ಕಲಬುರಗಿ: ವಿಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಇನ್ ಕಿಂಡ್ ಯೋಜನೆಯಡಿ ಲ್ಯಾಪ್‌ಟಾಪ್, ಯಂತ್ರಚಾಲಿತ ದ್ವಿಚಕ್ರ ವಾಹನ, ಸಾಧನೆ ಸಲಕರಣೆ, ಹೊಲಿಗೆ ಯಂತ್ರ ಹಾಗೂ ಬ್ರೈಲ್ ಕೀಟ್ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಾದಿಕ್ ಹುಸೇನ್ ಖಾನ್ ತಿಳಿಸಿದ್ದಾರೆ.

ಅಂಧ ವಿದ್ಯಾಥಿಗಳಿಗೆ ಟಾಕಿ೦ಗ್‌ ಲ್ಯಾಪ್‌ಟಾಪ್‌ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಸಾಧನೆ ಸಲಕರಣೆಗಳ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಗೆ ಯಂತ್ರ ಯೋಜನೆ ಹಾಗೂ ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‌ಕಿಟ್‌ ಯೋಜನೆಗಳಿಗೆ ಅರ್ಹ ಫಲಾನುಭವಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

2023-24ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಸುವಿಧಾ ಯೋಜನೆಯಡಿಯಲ್ಲಿ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‌ಲೈನ್‌ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿರುತ್ತದೆ.  ಫಲಾನುಭವಿಗಳು ಗ್ರಾಮ ಒನ್‌, ಕರ್ನಾಟಕ ಒನ್‌, ಬೆ೦ಗಳೂರು ಒನ್‌, ಮತ್ತು ಸೇವಾಸಿಂಧು https://sevasindhu.karnataka.gov.in/sevasindhu/kannada ಪೋರ್ಟಲ್‌ನಲ್ಲಿ ಅರ್ಜಿಗಳನ್ನು ದಿನಾಂಕ: 05.01.2024 ಮತ್ತು ಕೊನೆಯ ದಿನಾಂಕ:30.01.2024 ವರೆಗೆ ಸಲ್ಲಿಸಲು ಅವಕಾಶ ವಿರುತದೆ ಎಂದು ಸಾದಿಕ್ ಹುಸೇನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲ ಇಲಾಖೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here