ಸುರಪುರ: ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ನಡೆಯಲಿರುವ ಮರೆಮ್ಮ ದೇವಿ ಜಾತ್ರೆಯನ್ನು ರದ್ದು ಮಾಡುವಂತೆ ಮಾದಿಗ ಸಮಾಜದ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ನಗರದಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ವಿನಂತಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮುಖಂಡರು,ದೇವಿಕೇರಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬೇರೆ ಪಂಗಡದವರು ಮರೆಮ್ಮ ದೇವಿ ಜಾತ್ರೆಯನ್ನು ಹಮ್ಮಿಕೊಂಡು ಜನೆವರಿ 10 ರಂದು ಮದ್ಹ್ಯಾನ ಕೃಷ್ಣಾ ನದಿಗೆ ಗಂಗಾ ಸ್ನಾನಕ್ಕೆ ಹೋಗಿ 11ನೇ ತಾರಿಖು ಗ್ರಾಮದಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನದ ಪ್ರವೇಶ ಕಾರ್ಯಕ್ರಮವಿರುತ್ತದೆ.ಆದರೆ ಈ ಜಾತ್ರೆಯಲ್ಲಿ ನಮ್ಮ ಮಾದಿಗ ಸಮುದಾಯದ ಜನರನ್ನು ದೂರವಿಟ್ಟು ಜಾತ್ರೆ ಮಾಡಲು ಮೇಲ್ವರ್ಗದವರ ಕುಮ್ಮಕ್ಕಿನಿಂದ ನಮ್ಮ ಸಮುದಾಯದವರನ್ನು ಹೊರಗಿಟ್ಟು ಜಾತ್ರೆ ಮಾಡುವ ಜೊತೆಗೆ ಗ್ರಾಮದಲ್ಲಿ ಕೋಮು ಗಲಭೆ ನಡೆಸುವ ಹುನ್ನಾರ ನಡೆದಿದೆ,ಇದರಿಂದ ಜಾತ್ರೆ ಸಮಯದಲ್ಲಿ ಗ್ರಾಮದಲ್ಲಿ ಗಲಭೆ ನಡೆಯುವ ಸಾಧ್ಯತೆ ಇದ್ದು ಕೂಡಲೇ ಈ ಜಾತ್ರೆಯನ್ನು ರದ್ದುಗೊಳಿಸಬೇಕು,ಒಂದು ವೇಳೆ ಜಾತ್ರೆ ನಡೆದು ಏನಾದರು ಅನಾಹುತ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆ ಹೊಣೆಯಾಗಬೇಕಾಗಲಿದೆ ಎಂದು ಎಚ್ಚರಿಸಿ ಪೊಲೀಸ್ ಇನ್ಸ್ಪೇಕ್ಟರ್‍ಗೆ ಬರೆದ ಮನವಿಯನ್ನು ಪಿ.ಎಸ್.ಐ ಕೃಷ್ಣಾ ಸುಬೇದಾರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಸಿದ್ರಾಮಪ್ಪ ಯಡ್ರಾಮಿ,ಜಾಂಬವ ಯುವ ಸೇನೆ ಜಿಲ್ಲಾಧ್ಯಕ್ಷ ಹಣಮಂತ ಎಮ್.ಬಿಲ್ಲವ್,ಆರ್.ಪಿ.ಐ ಜಿಲ್ಲಾಧ್ಯಕ್ಷ ತಿಮ್ಮಣ್ಣ ಎಮ್.ಬಿಲ್ಲವ್,ಮುಖಂಡರಾದ ರಾಮಣ್ಣ ಬಿಲ್ಲವ್,ಮಲ್ಲಪ್ಪ ಬಿಲ್ಲವ್,ಹೈಯಾಳಪ್ಪ ಬಿಲ್ಲವ್,ನಾಗಪ್ಪ ಬಿಲ್ಲವ್,ಪ್ರಕಾಶ,ಸಣ್ಣ ತಿಮ್ಮಣ್ಣ,ಕಿರಣ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.