ಮರೆಮ್ಮ ಜಾತ್ರೆ ರದ್ದುಗೊಳಿಸಲು ಪೊಲೀಸರಿಗೆ ದೂರು

0
17

ಸುರಪುರ: ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ನಡೆಯಲಿರುವ ಮರೆಮ್ಮ ದೇವಿ ಜಾತ್ರೆಯನ್ನು ರದ್ದು ಮಾಡುವಂತೆ ಮಾದಿಗ ಸಮಾಜದ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ನಗರದಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ವಿನಂತಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮುಖಂಡರು,ದೇವಿಕೇರಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬೇರೆ ಪಂಗಡದವರು ಮರೆಮ್ಮ ದೇವಿ ಜಾತ್ರೆಯನ್ನು ಹಮ್ಮಿಕೊಂಡು ಜನೆವರಿ 10 ರಂದು ಮದ್ಹ್ಯಾನ ಕೃಷ್ಣಾ ನದಿಗೆ ಗಂಗಾ ಸ್ನಾನಕ್ಕೆ ಹೋಗಿ 11ನೇ ತಾರಿಖು ಗ್ರಾಮದಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನದ ಪ್ರವೇಶ ಕಾರ್ಯಕ್ರಮವಿರುತ್ತದೆ.ಆದರೆ ಈ ಜಾತ್ರೆಯಲ್ಲಿ ನಮ್ಮ ಮಾದಿಗ ಸಮುದಾಯದ ಜನರನ್ನು ದೂರವಿಟ್ಟು ಜಾತ್ರೆ ಮಾಡಲು ಮೇಲ್ವರ್ಗದವರ ಕುಮ್ಮಕ್ಕಿನಿಂದ ನಮ್ಮ ಸಮುದಾಯದವರನ್ನು ಹೊರಗಿಟ್ಟು ಜಾತ್ರೆ ಮಾಡುವ ಜೊತೆಗೆ ಗ್ರಾಮದಲ್ಲಿ ಕೋಮು ಗಲಭೆ ನಡೆಸುವ ಹುನ್ನಾರ ನಡೆದಿದೆ,ಇದರಿಂದ ಜಾತ್ರೆ ಸಮಯದಲ್ಲಿ ಗ್ರಾಮದಲ್ಲಿ ಗಲಭೆ ನಡೆಯುವ ಸಾಧ್ಯತೆ ಇದ್ದು ಕೂಡಲೇ ಈ ಜಾತ್ರೆಯನ್ನು ರದ್ದುಗೊಳಿಸಬೇಕು,ಒಂದು ವೇಳೆ ಜಾತ್ರೆ ನಡೆದು ಏನಾದರು ಅನಾಹುತ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆ ಹೊಣೆಯಾಗಬೇಕಾಗಲಿದೆ ಎಂದು ಎಚ್ಚರಿಸಿ ಪೊಲೀಸ್ ಇನ್ಸ್ಪೇಕ್ಟರ್‍ಗೆ ಬರೆದ ಮನವಿಯನ್ನು ಪಿ.ಎಸ್.ಐ ಕೃಷ್ಣಾ ಸುಬೇದಾರ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಿ.ಎಸ್.ಐ ಸಿದ್ರಾಮಪ್ಪ ಯಡ್ರಾಮಿ,ಜಾಂಬವ ಯುವ ಸೇನೆ ಜಿಲ್ಲಾಧ್ಯಕ್ಷ ಹಣಮಂತ ಎಮ್.ಬಿಲ್ಲವ್,ಆರ್.ಪಿ.ಐ ಜಿಲ್ಲಾಧ್ಯಕ್ಷ ತಿಮ್ಮಣ್ಣ ಎಮ್.ಬಿಲ್ಲವ್,ಮುಖಂಡರಾದ ರಾಮಣ್ಣ ಬಿಲ್ಲವ್,ಮಲ್ಲಪ್ಪ ಬಿಲ್ಲವ್,ಹೈಯಾಳಪ್ಪ ಬಿಲ್ಲವ್,ನಾಗಪ್ಪ ಬಿಲ್ಲವ್,ಪ್ರಕಾಶ,ಸಣ್ಣ ತಿಮ್ಮಣ್ಣ,ಕಿರಣ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here