ದಕ್ಷಿಣ ಮತಕ್ಷೇತ್ರದ ಹಲವಾರು ಕೊಳಚೆ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

0
16

ಕಲಬುರಗಿ: ೧೦.ದಕ್ಷಿಣ ಮತಕ್ಷೇತ್ರದ ಕರ್ನಾಟಕ ಕೊಳಗೆರಿ ಅಭಿವೃದ್ಧಿ ಮಂಡಳವತಿಯಿಂದ ಪ್ರಧಾನಮಂತ್ರಿ ಅವಾಜ್ ಯೋಜನೆಯ ಸರ್ವರಿಗೂ ಸೂರು ಅಡಿಯಲ್ಲಿ ನಿರ್ಮಿಸುತ್ತಿರುವ ಹಲವಾರು ಮನೆಗಳಿಗೆ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ ರವರು ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಿದರು.

ಸುಮಾರು ಒಂದು ಒಂದೂವರೆ ಗಂಟೆ ಕಾಲ ಕೊಳಚೆ ಪ್ರದೇಶದಲ್ಲಿ ಸಮಯ ಕಳೆದು ಅಲ್ಲಿನ ಜನರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು.

Contact Your\'s Advertisement; 9902492681

ನಂತರ ಕೆಸರಟಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ರಾಜೀವ್ ಗಾಂಧಿ ಆವಾಜ್ ಯೋಜನೆ ಅಡಿಯಲ್ಲಿ ನಿರ್ಮಿಸಿರುವ 320 ಜಿ +3 ಕಟ್ಟಡಗಳನ್ನು ವೀಕ್ಷಣೆ ಮಾಡಿದರು

5 ವರ್ಷದ ಹಿಂದೆ 320 ಕಟ್ಟಡಗಳು ನಿರ್ಮಾಣ ಮಾಡಿದ್ದು ಫಲಾನುಭವಿಗಳಿಗೆ ವಿತರಿಸಬೇಕಿದೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮ ಗೊಳಿಸಬೇಕೆಂದು ಸ್ಥಳದಲ್ಲೇ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವದಾಸ್ ಅವರಿಗೆ ಕರೆ ಮಾಡಿ ಎರಡು ಮೂರು ದಿನಗಳಲ್ಲಿ ಪಟ್ಟಿಯನ್ನು ಸಿದ್ದಪಡಿಸಲು ನಿರ್ದೇಶನ ನೀಡಿದರು

ಅಭಿವೃದ್ಧಿ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಎಂ.ಎ.ಖಯೂಮ,ಸಹಾಯಕ ಕಾರ್ಯ ಪಾಲಕ ಅಭಿಯಂತರ ಶ್ರೀಧರ್, ಸಹಾಯಕ ಅಭಿಯಂತರ ಚೇತನ್. ಆರ್ .,ಮತ್ತು ಪವನ್ ಎ ಹಾಗೂ ಗುತ್ತಿಗೆದಾರರು ಅವರ ಜೊತೆಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here