ಮೀಸಲಾತಿ ಕುರಿತು ಅಸಂಬದ್ಧ ಹೇಳಿಕೆ: ಸಂಸದ ಡಾ. ಜಾಧವ್ ವಜಾಕ್ಕೆ ಆಗ್ರಹ

0
500

ಕಲಬುರಗಿ: ಲಂಬಾಣಿ ಸಮುದಾಯಕ್ಕೆ ದೊರೆತ ಮೀಸಲಾತಿ ಕುರಿತು ಅಸಂಬದ್ಧ ಹೇಳಿಕೆಯನ್ನು ನೀಡಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಪಚಾರ ಎಸಗಿದ ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರನ್ನು ಕೂಡಲೇ ಸಂಸತ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಿರಿಯ ದಲಿತ ಮುಖಂಡ ಗುರುಶಾಂತ್ ಪಟ್ಟೇದಾರ್ ಅವರು ಇಲ್ಲಿ ಒತ್ತಾಯಿಸಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಾ. ಉಮೇಶ್ ಜಾಧವ್ ಅವರು ಕ್ಷತ್ರೀಯ ಮತ್ತು ಮರಾಠಾ ಸಮಾಜದ ಕಾರ್ಯಕ್ರಮದಲ್ಲಿ ತಾವು ಕ್ಷತ್ರೀಯ ಸಮಾಜದ ಸಂಬಂಧಿಕರು ಎಂದು ಹೇಳಿದ್ದು ಖಂಡನೀಯ ಎಂದು ಆಕ್ಷೇಪಿಸಿದರು. ರಾಜಸ್ತಾನದಲ್ಲಿ ಧಂಗೆ ಎದ್ದಾಗ ನಾವು ಓಡಿ ಬಂದು ಲಂಬಾಣಿಗಳಾಗಿ ಪರಿವರ್ತನೆಯಾಗಿದ್ದೇವೆ. ಮೂಲತ: ನಾಔಉ ಕ್ಷತ್ರಿಯರು ಎಂದು ಸಂಸದ ಡಾ. ಜಾಧವ್ ಅವರು ಹೇಳಿಕೆ ನೀಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ೧೯೩೬ರಲ್ಲಿ ಮೈಸೂರಿನ ಕೃಷ್ಣರಾಜ್ ಒಡೆಯರು ಅಂದಿನ ಕಾಲದಲ್ಲಿ ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಲಂಬಾಣಿ ಜನರಿಗೆ ಮೀಸಲಾತಿ ಕೊಟ್ಟಿದ್ದಾರೆ. ಆದಾಗ್ಯೂ, ಡಾ. ಬಿ.ಆರ್. ಅಂಬೇಡ್ಕರ್ ಅವರು ಅದರ ಪ್ರಸ್ತಾನೆ ಇನ್ನೂ ಎತ್ತಿದ್ದಿಲ್ಲ. ನಮಗೆ ಮೈಸೂರಿನ ಮಹಾರಾಜರು ಮೀಸಲಾತಿ ಕೊಟ್ಟಿದ್ದಾರೆ ಎಂದು ಸಂಸದರು ಹೇಳಿಕೆ ನೀಡಿದ್ದು ಅಸಂಬದ್ಧವಾಗಿದೆ ಎಂದು ಅವರು ಟೀಕಿಸಿದರು.

Contact Your\'s Advertisement; 9902492681

೧೯೨ರಲ್ಲಿ ಪುಣೆ ಒಪ್ಪಂದದ ಸಮಯದಲ್ಲಿ ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಚರ್ಚೆ ಮಾಡಿದ್ದರು. ೨ನೇ ಹಂತವಾಗಿ ಲಂಡನ್ನಿನಲ್ಲಿ ಜರುಗಿದ ದುಂಡು ಮೇಜಿನ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ಪ್ರಸ್ತಾವನೆ ಇಟ್ಟಿದ್ದರು. ಈ ಕುರಿತು ಗೊತ್ತಿಲ್ಲದೇ ಸಂಸದರು ಮೂರ್ಖರಂತೆ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದರು. ಸ್ವಾತಂತ್ರ್ಯ ನಂತರ ಡಾ. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಇಡೀ ದೇಶದ ಯಾವುದೇ ರಾಜ್ಯದಲ್ಲಿ ಕೂಡ ಲಂಬಾಣಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿಲ್ಲ. ಆದಾಗ್ಯೂ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ೧೯೭೬ರಲ್ಲಿ ದಿ. ಡಿ. ದೇವರಾಜ್ ಅರಸು ಅವರು ಲಂಬಾಣಿ ಸಮುದಾಯಕ್ಕೆ ಮೀಸಲಾತಿ ನೀಡಿದರು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸಂಸದ ಡಾ. ಉಮೇಶ್ ಜಾಧವ್ ಅವರು ತಮ್ಮ ಅಸಂಬದ್ಧ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕೂಡಲೇ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೀಸಲಾತಿ ರಹಿತ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಬೇಕು ಎಂದು ಒತ್ತಾಯಿಸಿದ ಅವರು, ಕೂಡಲೇ ಬಿಜೆಪಿ ವರಿಷ್ಠರು ಸಂಸದ ಡಾ. ಉಮೇಶ್ ಜಾಧವ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾದೇವ್ ನಾಗನಳ್ಳಿ, ದಿಗಂಬರ್ ಕಾಂಬಳೆ, ಶಿವಕುಮಾರ್ ಮದ್ರಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here