ಮುಸ್ಲಿಂ ಶಾಸಕರ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ

0
100

ಕಲಬುರಗಿ: ಮುಸ್ಲಿಂ ಸಮುದಾಯದ ವಿರುದ್ಧ ನಿರಂತರ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿರು ಮುಸ್ಲಿಂ ಶಾಸಕರು ಮೌನ ವಹಿಸುತ್ತಿರುವದನ್ನು ಖಂಡಿಸಿ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ SDPI ಜಿಲ್ಲಾ ಘಟಕ ಮುಸ್ಲಿಂ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶನುವಾರ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದಿಂದ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ನಿವಾಸದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Contact Your\'s Advertisement; 9902492681

ಕಾಂಗ್ರೆಸ್ ಆಡಳಿತ ಸರ್ಕಾರ ಚುನಾವಣೆ ಸಂದರ್ಭದಲ್ಲಿ  ಮುಸ್ಲಿಂ ಸಮುದಾಯಕ್ಕೆ  ಸಾಕಷ್ಟು ಭರವಸೆಯನ್ನು ನೀಡಿತು. ಅದು ಯಾವುದು ಸಹ ಈಡೇರಿಸದೇ ಕೋಮುವಾದಿ ಬಿಜೆಪಿ ಪಕ್ಷದಂತೆ  ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹೀಮ್ ಪಟೇಲ್ ಆರೋಪಿಸಿದರು.

ಮೀತಿಲಾತಿ ಕುರಿತು ಯಾವುದು ಚರ್ಚೇ ಮಾಡುತ್ತಿಲ್ಲ, ದ್ವೇಷದ ಭಾಷಣ ಕುರಿತು ಯಾವುದು ಕ್ರಮ ಕೈಕೊಂಡಿಲ್ಲ, ಇದು ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಮಾಡುತ್ತಿರುವ ಅನ್ಯಾಯವಾಗಿದೆ  ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ನೀತಿ‌ ಅನುಸರಿಸುತ್ತಿರುವ ಶಾಸಕರು ಮೌನ ಮುರಿದು ಪ್ರಶ್ನೀಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ಸೈಯದ್ ದಸ್ತಗೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಲೀಂ ಇಲಾಹಿ, ಮೊಹಮ್ಮದ್ ಮೊಹಸಿನ್ ಸೇರಿದಂತೆ ಪಕ್ಷದ ಮಹಿಳಾ ಘಟಕದ ಸದಸ್ಯರು ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here