ಕಲಬುರಗಿ: ಆಳಂದ ತಾಲ್ಲೂಕಿನ ಚಿತಲಿ ಗ್ರಾಮದ ಪ್ರೀತಿ ಶಿವಶರಣಪ್ಪಾ ಕವಲಗಾ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಘೋಷಿಸಿದೆ. ಸಹ ಪ್ರಾಧ್ಯಾಪಕರಾದ ಡಾ. ಅರುಣಾ ಎಸ್.ಅವರ ಮಾರ್ಗದರ್ಶನದಲ್ಲಿ “ಆಧುನಿಕ ಕನ್ನಡ ಸಾಹಿತ್ಯದಲ್ಲಿ ಯಾಜಮಾನ್ಯ” (ಹೈದ್ರಾಬಾದ್ ಕರ್ನಾಟಕದ ಆಯ್ದ ಕಥೆ -ಕಾದಂಬರಿಗಳನ್ನು ಅನುಲಕ್ಷಿಸಿ) ಎಂಬ ವಿಷಯ ಕುರಿತ ಅವರ ಮಹಾಪ್ರಬಂಧ ಮಂಡನೆಗೆ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಿತಲಿ ಗ್ರಾಮದಲ್ಲಿ, ಪ್ರೌಢ ವಿದ್ಯಾಭ್ಯಾಸವನ್ನು ಎಂ.ಎ.ಆರ್.ಜಿ ಕನ್ಯಾ ಪ್ರೌಢಶಾಲೆಯಲ್ಲಿ, ಪಿ.ಯು.ಸಿಯನ್ನು ರಾಮ ಮನೋಹರ ಲೋಹಿಯಾ ಕಾಲೇಜಿನಲ್ಲಿ, ಪದವಿಯನ್ನು ಎ.ವಿ.ಪಾಟೀಲ್ ಡಿಗ್ರಿ ಕಾಲೇಜ ಆಳಂದದಲ್ಲಿ ಪಡೆದು ನಂತರ ಎಂ.ಎ ಅನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ,ಕಲಬುರ್ಗಿಯಲ್ಲಿ ಪೂರ್ಣಗೊಳಿಸಿದ್ದಾರೆ.
ಅವರು ಜನವರಿ 10.2024 ರಂದು ನಡೆದ ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರಿಂದ ಪಿಎಚ್.ಡಿ ಪದವಿಯನ್ನು ಸ್ವೀಕರಿಸಿದ್ದಾರೆ. ಡಾ. ಪ್ರೀತಿ ಕವಲಗಾ ಅವರ ಈ ಸಾಧನೆಗೆ ಕುಟುಂಬಸ್ಥರು,ಬಂಧುಗಳು ಹಾಗೂ ಸ್ನೇಹಿತರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.