ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘ: ಅಭಿನಂದನಾ ಸಮಾರಂಭ

0
24

ಒಕ್ಕೂಟ ಬೈಲಾದಲ್ಲಿ ಶೀಘ್ರದಲ್ಲಿಯೇ ಹಟಗಾರ ಸಮಾಜ ಸೇರ್ಪಡೆ: ಸಂಗಾ

ಕಲಬುರಗಿ: ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಬೈಲಾವನ್ನು ತಿದ್ದುಪಡಿ ಮಾಡುವ ಮೂಲಕ ಹಟಗಾರ ಸಮಾಜ ಸೇರ್ಪಡೆ ಮಾಡುವ ಸಂಬಂಧ ರಾಜ್ಯ ಅಧ್ಯಕ್ಷರೊಂದಿಗೆ ಮಾತನಾಡಿ ಒತ್ತಡ ಹಾಕುವುದಾಗಿ ಕರ್ನಾಟಕ ನೇಕಾರ ಸಮುದಾಯಗಳ ಒಕ್ಕೂಟದ ಕಲಬುರಗಿ ಜಿಲ್ಲಾಧ್ಯಕ್ಷ ಪ್ರದೀಪ ಸಂಗಾ ಭರವಸೆ ನೀಡಿದರು.

ನಗರದ ಸಿಂಫೋನಿ ಟೆಕ್ಸ್‍ಟೈಲ್ ಮೇಲ್ಮಹಡಿಯಲ್ಲಿ ಶನಿವಾರ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯ ಸಂಘದ ಸಾಮಾನ್ಯ ಸಭೆಯಲ್ಲಿ ಹಟಗಾರ ಸಮಾಜ ಸೇರ್ಪಡೆ ಬಗ್ಗೆ ಮಾತನಾಡುವೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಇಲ್ಲಿಯವೆರೆಗೆ ರಾಜ್ಯ ಸಂಘದ ಸಾಮಾನ್ಯ ಸಭೆ ಆಗಿಲ್ಲ. ಬರುವ ದಿನಗಳಲ್ಲಿ ಹಟಗಾರ ಸಮಾಜ ಸೇರ್ಪಡೆ ಮಾಡಿಯೇ ತೀರುತ್ತೇನೆ. ಆಗದಿದ್ದ ಪಕ್ಷದಲ್ಲಿ ರಾಜೀನಾಮೆಗೂ ಸಿದ್ಧ. ಈ ಬಗ್ಗೆ ಯಾವ ಸಂದೇಹ ಬೇಡ. ರಾಜ್ಯದಲ್ಲಿ ನೇಕಾರ ಬಾಂಧವರು ಕನಿಷ್ಠ 70 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಹಟಗಾರ ಬಾಂಧವರು ಹೆಚ್ಚಿದ್ದಾರೆ. ಈಗಾಗಲೇ ರಾಜ್ಯ ಸಂಘದ ಅಧ್ಯಕ್ಷ ಬಿ.ಎಸ್.ಸೋಮಶೇಖರ ಅವರಿಗೆ ಸೇರ್ಪಡೆ ಕುರಿತು ಮನದಟ್ಟು ಆಗಿದೆ. ಬೈಲಾ ತಿದ್ದುಪಡಿಗಾಗಿ ಸಾಮಾನ್ಯ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎನ್ನುವ ಭರವಸೆ ಮೂಡಿಸಿದ್ದನ್ನು ಸಂಗಾ ಸ್ಮರಿಸಿದರು.

ನೇಕಾರ ಬಾಂಧವರು ರಾಜಕೀಯ, ಸಾಮಾಜಿಕ, ಆರ್ಥಿಕ ವಲಯದಲ್ಲಿ ಗಟ್ಟಿತನ ಬೆಳೆಸಿಕೊಳ್ಳಬೇಕಾದರೆ ಮೊದಲು ನಾವೆಲ್ಲ ಒಂದಾಗಬೇಕು. ಇದರಿಂದ ಸಂಘಟನೆಗೆ ಬಲ ಬರಲು ಸಾಧ್ಯ. ಆಶೀರ್ವಾದ ರೂಪದ ಸನ್ಮಾನ ಇನ್ನೂ ಹೆಚ್ಚಿನ ಜವಾಬ್ದಾರಿ ತಂದು ಕೊಟ್ಟಿದೆ ಎಂದರು. ಕರ್ನಾಟಕ ನೇಕಾರ ಸಮುದಾಯಗಳ ಒಕ್ಕೂಟದ ಹಿರಿಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿನಾಥ ನಿಂಬಾಳ ಮಾತನಾಡಿ, ಸಮಾಜದ ಒಳಸುಳಿಗಳು, ರಾಜಕೀಯ ಬೇಗುದಿ ಕಂಡು ಬೇಸರ ವ್ಯಕ್ತವಾಗಿದ್ದು, ಒಂದು ಹಂತಕ್ಕೆ ರೋಷಿ ಹೋಗಿರುವೆ. ನೇಕಾರ ನೇತಾರರು ಬಲಗೊಳ್ಳಬೇಕು ಎನ್ನುವ ಸದಿಚ್ಛೆ ಇದ್ದರೂ, ನಮ್ಮಲ್ಲಿರುವ ಸಂಘಟನಾತ್ಮಕ ಶಕ್ತಿ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಹೆಚ್ಚು ನೇಕಾರರ ಸಂಖ್ಯೆಯನ್ನು ಹೊಂದಿರುವ ಆಳಂದನಲ್ಲಿ ನೇಕಾರ ನೇತಾರರು ಚುನಾವಣೆಗೆ ಸ್ಪರ್ಧಿಸುವ ಕಾಲ ಬರಬೇಕು ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು.

ಒಕ್ಕೂಟದ ಇನ್ನೋರ್ವ ಹಿರಿಯ ಉಪಾಧ್ಯಕ್ಷ ನಾರಾಯಣರಾವ ಸಿಂಘಾಡೆ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಶಿವಪುತ್ರಪ್ಪ ಭಾವಿ ಮಾತನಾಡಿದರು. ಅಧ್ಯಕ್ಷ ಚನಮಲ್ಲಪ್ಪ ನಿಂಬೇಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ, ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ, ಸಹಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ಖಜಾಂಚಿ ಶ್ರೀನಿವಾಸ ಬಲಪುರ, ಯುವ ಅಧ್ಯಕ್ಷ ಲಕ್ಷ್ಮೀಕಾಂತ ಜೋಳದ, ಉಪಾಧ್ಯಕ್ಷ ರವಿಕುಮಾರ ಯಳಸಂಗಿ, ರೇವಣಸಿದ್ಧಪ್ಪ ಗಡ್ಡದ, ಕಾನೂನು ಸಲಹೆಗಾರ ಶಿವಲಿಂಗಪ್ಪ ಅಷ್ಟಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮಾದನ ಹಿಪ್ಪರಗಿ ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘದ ಅಧ್ಯಕ್ಷ ಗುರುನಾಥ ಸೊನ್ನದ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾವಬಹಾದ್ದೂರ ರೂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮನಾಥ ರೇವತಗಾಂವ ನಿರೂಪಿಸಿದರು. ಸತೀಶ ಜಮಖಂಡಿ ವಂದಿಸಿದರು.

ಸೋಮಶೇಖರ ಧುತ್ತರಗಿ, ಚಂದ್ರಕಾಂತ ಮುನ್ನೋಳ್ಳಿ, ಮಲ್ಲಿಕಾರ್ಜುನ ಹೊಸಮನಿ, ಚಂದ್ರಪ್ಪ ಬುಕ್ಕಾ, ಶ್ರವಣಕುಮಾರ ಮುನ್ನೊಳ್ಳಿ, ಕ್ಷೀರಾಲಿಂಗ ರೂಗಿ, ಪರಮೇಶ್ವರ ಮುನ್ನೋಳ್ಳಿ, ಭೀಮಾಶಂಕರ ಗಡ್ಡದ, ಬಸವರಾಜ ಕನಕಾ, ಅಶೋಕ ಮುನ್ನೋಳ್ಳಿ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here