ಕಲಬುರಗಿ: ಶಹಾಬಾದ್ ನಗರದ ಬಾಲಾಜಿ ದೇವಸ್ಥಾನದಲ್ಲಿ ಸ್ವಚತೆ ಅಭಿಯಾನಕ್ಕೆ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಭಾನುವಾರ ಚಾಲನೆ ನೀಡಿದರು.
ಐತಿಹಾಸಿಕ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಇಂದು ಭಾನುವಾರ ಮಕರ ಸಂಕ್ರಾಂತಿ ದಿನದಿಂದ 22 ರವರೆಗೆ ಎಲ್ಲ ದೇವಾಲಯಗಳು ಹಾಗೂ ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗ ಬೇಕೆಂದು ಕರೆ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮ ಗ್ರಾಮದ ದೇವಸ್ಥಾನಗಳನ್ನು ಸ್ವಚ್ಛತೆಗೊಳಿಸಿ, ಪವಿತ್ರ ರಾಮ ಮಂದಿರ ಉದ್ಘಾಟನೆಯಾಗುವ ಹೊತ್ತಿಗೆ ರಾಜ್ಯದ ಪ್ರತಿ ದೇವಾಲಯ ಹಾಗೂ ದೇವಾಲಯಗಳ ಆವರಣ ಶುಚಿಗೊಳಿಸಿ ಜನವರಿ 22 ರಂದು ಭಕ್ತಿ, ಸಡಗರ ಹಾಗೂ ಸಂಭ್ರಮದಿಂದ ಆಚರಿಸೋಣ ಎಂದರು.
ನಮ್ಮ ಮಹಾಸೇವೆಯೊಂದಿಗೆ ಭವ್ಯವಾದ ಸ್ವಾಗತಿಸಿ ಇಂದಿನಿಂದ ಜನವರಿ 22 ರವರೆಗೆ ಜಿಲ್ಲೆಯ ಪ್ರತಿಯೊಂದು ದೇವಾಲಯ ಮತ್ತು ಪ್ರತಿಯೊಂದು ಮೂಲೆಯನ್ನು ಸ್ವಚ್ಛವಾಗಿಡೋಣ ಮತ್ತು ಭಾರತಕ್ಕಾಗಿ ಒಮ್ಮೆ ಇದು ಸಹಸ್ರಮಾನದ ಒಮ್ಮೆ ಬರುವ ಕ್ಷಣ ಇದನ್ನು ಐತಿಹಾಸಿಕವಾಗಿ ಸಂಬ್ರಮಿಸೋಣ ಎಂದು ಕರೆ ನೀಡಿದರು.