ಸಪ್ತ ನೇಕಾರರ ಸೇವಾ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

0
26

ಕಲಬುರಗಿ: ಸಪ್ತ ನೇಕಾರರ ಸೇವಾ ಕೇಂದ್ರದಲ್ಲಿ ಸದ್ಗುರು ಶ್ರೀ. ದಾಸಿಮಯ್ಯ ಲಾ ಚೇoಭರ ನಲ್ಲಿ, ವೆಸ್ಟ್ ಬೆಂಗಾಲನ ನಿವಾಸಿಯಾಗಿದ್ದ ಕಾಲದಲ್ಲಿ ಪ್ರಸಿದ್ಧ ನ್ಯಾಯವಾದಿಯವರ ಸುಪುತ್ರರಾಗಿ ಹುಟ್ಟಿ, ಶತಮಾನ ಕಂಡ  ಮಹಾಮೇಧಾವಿ, ಯುವಶಕ್ತಿ, ರಾಷ್ಟ್ರೀಯ ಆಧ್ಯಾತ್ಮಿಕ ಗುರು, ಸ್ವಾಮಿ ವಿವೇಕಾನಂದರ  160 ನೇ ಜಯಂತಿ ಆಚರಿಸಲಾಯಿತು.

ಭಾರತದ ಯುವ ಪೀಳಿಗೆಯಿಂದ ವಿಶ್ವ ಉದ್ದಾರವಾಗಲಿದೆ ಎಂದು ಪ್ರತಿಪಾದಿಸಿದ ಯುವ ನಾಯಕ, ರಾಷ್ಟ್ರೀಯ ಚಿಂತನೆಗಳ ಮೂಲಕ  ಸಮಾನತೆ ಸಾರಿದ ಈ ನೆಲವೇ ಶ್ರೇಷ್ಠ ಎಂದು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗ ವಹಿಸಿ ಕೀರ್ತಿ ತಂಡ ಸಂತ ಎಂದು  ಕಲಬುರಗಿ ಆಧ್ಯಾತ್ಮಿಕ ಸೇವಾ  ಬಳಗದ ವತಿಯಿಂದ ಹಮ್ಮಿಕೊಂಡ 160 ನೇ ಜಯಂತಿ ಆಚರಿಸಲಾಯಿತು.

Contact Your\'s Advertisement; 9902492681

ಯುವಕರು ಕೂಡಾ ಹಿಂದೆ ಉಳಿದ ಸಮುದಾಯ ಅಭಿವೃದ್ಧಿ ಹೊಂದಲು ವಿವೇಕಾನಂದರಂತೆ ಸೇವೆಗೆ ತೆಗೆದುಕೊಂಡ ನಿರ್ಣಯದಂತೆ ಸಪ್ತ ನೇಕಾರರ  ಭೂ ಆಸ್ತಿ ಉಳಿಸಿ, ಅಭಿವೃದ್ಧಿ ಪಡಿಸುವಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಬೇಕೆಂದು ನ್ಯಾಯವಾದಿ ಜೇ. ವಿನೋದ ಕುಮಾರ ಕರೆ ನೀಡಿದರು.

ಸಪ್ತ ನೇಕಾರರ ಸ್ಥಳಗಳ ಅಭಿವೃದ್ಧಿಗೆ ಉದ್ದೇಶಿಸಿ ನೀಡಲಾದ ಮನವಿಗಳನ್ನು ಸರಕಾರ ಪರಿಗಣಿಸಲು  ಕೊರಬೇಕು. ನೇಕಾರ ಸಮಾಜದ ಬೇಡಿಕೆಯನ್ನು ಆದ್ಯತೆ ಮೇರೆಗೆ ಪರಿಹರಿಸುವ ಕಾರ್ಯವಾಗಬೇಕಾಗಿದೆ.  ಮಾನವೀಯ ಮೌಲ್ಯಗಳನ್ನು ಸದಾ ಗೌರವಿಸುವ ಮೂಲಕ ನೇಕಾರರು ಸಮಾನತೆಗಾಗಿ ಹೋರಾಡಬೇಕಾಗಿದೆ. 12 ನೇ ಶತಮಾನದ ಶ್ರೀ ಬಸವೇಶ್ವರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವ ಮೂಲಕ ರಾಜ್ಯದ ಕೀರ್ತಿ ಹೆಚ್ಚುಸುವದಾದರೆ  ನಮ್ಮ ಸದ್ಗುರು ದಾಸಿಮಯ್ಯ ನವರನ್ನು ರಾಷ್ಟ್ರೀಯ ಧರ್ಮ ಗುರು ಎಂದು ಘೋಷಣೆ ಮಾಡಬೇಕು ಎಂದು ನೇಕಾರರು ಆಗ್ರಹಿಸಿ ಫೆ.9 ರಂದು, ಧರ್ಮ ಗುರು ಶ್ರೀ ದಾಸಿಮಯ್ಯನವರ ಜಯಂತಿ ಪ್ರಯುಕ್ತ ಸೂಕ್ತ ಸಭೆ ಅಯೋಜಿಸಿ, ಕಾನೂನಾತ್ಮಕವಾಗಿ ಒಪ್ಪಿಕೊಳ್ಳುವಂಥಹ ನಿರ್ಣಯ ತೆಗೆದುಕೊಳ್ಳುವ ಮುಖಾಂತರ ಆಧ್ಯಾತ್ಮಿಕ ಸೇವಾ  ಬಳಗ ಸಹಕಾರ ನೀಡುವುದಾಗಿ ಹೇಳಿದರು.

ಶಿವಲಿಂಗಪ್ಪಾ ಅಷ್ಟಗಿ ಮಾತನಾಡಿ ಶರಣ ಧರ್ಮ, ಶರಣ ತತ್ವ , ಸಿದ್ಧಾಂತ ಪ್ರತಿಯೊಬ್ಬರೂ ಅಪ್ಪಿಕೊಂಡರೆ ಮಾತ್ರ ವೈಚಾರಿಕ ಸಮಾಜ ನಿರ್ಮಾಣವಾಗುತದೆ. 11 ನೇ ಶತಮಾನದಲ್ಲಿಯೇ ಅಸಮಾನತೆ ಹೋಗಲಾಡಿಸಲು, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ, ವಚನ ಸಾಹಿತ್ಯ ರಚನೆ ಮಾಡಿದ ಆದ್ಯ, ಪ್ರಥಮ  ಶರಣ ದಾಸಿಮಯ್ಯನವರ ವಾರಸುದಾರರು ಎಂದು ಹೆಮ್ಮೆಯಿಂದ ಸಮಾಜದಲ್ಲಿ ಹೇಳಬೇಕು ಎಂದರು.

ತೊಗಟವೀರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ್, ಕುರಹಿನ ಶೆಟ್ಟಿ ಸಮಾಜದ, ಅಧ್ಯಕ್ಷ ಬಸವರಾಜ ಕರದಳ್ಳಿ, ಉಪಾಧ್ಯಕ್ಷ ಕುಶಾಲ ಯಡವಳ್ಳಿ, ಪ್ರಧಾನ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್, ಖಜಾಂಚಿ ಮಲ್ಲಿನಾಥ ಕುಂಟೋಜಿ, ಸೇಡಂ ತಾಲೂಕಿನ ಹಟಗಾರ ಸಮಾಜದ ಅಧ್ಯಕ್ಷರಾದ ಡಾ. ಬಸವರಾಜ ಚನ್ನಾ, ಕಲಬುರಗಿಯ ದೇವಾಂಗ ಸಮಾಜದ ವಕೀಲರಾದ ಸಂತೋಷ ಗುರುಮಿಟಕಲ, ಇಂದಿನ ಕಾರ್ಯಕ್ರಮವನ್ನು ಯುವ ಶಕ್ತಿ ಸ್ವರೂಪಿ ವೆಂಕಟೇಶ್ ಬಲಪೂರ್ ಅವರಿಂದ ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು.

ಯುವ ಜನತೆಗೆ ಧ್ವನಿ ನೀಡಿದ ವಿವೇಕರ ಮಾತನ್ನು ಸಮಾಜಕ್ಕೆ ಮುಟ್ಟಿಸುವ ಪ್ರಯತ್ನ ಮಾಡೋಣವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here