ಕಲಬುರಗಿ: ನಗರದ ಬಸವ ಸಿರಿ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ರಿ. 18 ರಂದು ಗುರುವಾರ ಸಂಜೆ 5 ಗಂಟೆಗೆ ಬೇಸಿಕ್, (ನುಡಿ, ಇಂರ್ಟನೇಟ್) ಡಾಟಾ ಎಂಟ್ರಿ ಆಪರೇಟರ್ ಟ್ಯಾಲಿ ಇಆರ್‍ಪಿ9, ಜಿಎಸ್‍ಟಿ, ಟ್ಯಾಲಿ ಪ್ರೈಮ್, ಗ್ರಾಫೀಕ್‍ಡಿಜ್ಯಾನಿಂಗ್ ವಿವಿದ ಕೋರ್ಸಗಳ ಕಂಪ್ಯೂಟರ್ ತರಬೇತಿಯ ಉಚಿತ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ್ ತಿಳಿಸಿದ್ದಾರೆ.
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾಗಿರುವ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವದು. ಈ ಪ್ರಮಾಣ ಪತ್ರ ಎಲ್ಲಾ ಹುದ್ದೆಗೆ ಅನ್ವಯವಾಗುತ್ತದೆ. ತರಬೇತಿ ಪಡೆದ ಮೇಲೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡಲಾಗುವುದು.
ಈ ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್, ಎಸ್,ಎಸ್,ಎಲ್,ಸಿ ಫಾಸಾದ ಪ್ರಮಾಣ ಪತ್ರದ ಪ್ರತಿ, 2 ಪಾಸಪೊರ್ಟ್ ಅಳತೆಯ ಫೋಟೊ, ಜಾತಿ ಪ್ರಮಾಣ ಪತ್ರ ತಗೆದುಕೊಂಡು ಮುಂಗಡವಾಗಿ ತಮ್ಮ ಹೆಸರನ್ನು ನೋಂದಾಯಿಕೊಳ್ಳಲು ಅವರು ತಿಳಿಸಿದ್ದಾರೆ.
ಆಸಕ್ತರು, ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದ ಬಳಿಯಿರುವ ಮೆಡಿ ಸ್ಕ್ಯಾನ್ ಪಕ್ಕದ ಕ್ರಿಸ್ಟಲ್ ಪ್ಲಾಜಾ ಕಟ್ಟಡದ ನೆಲ ಮಹಡಿಯಲ್ಲಿರುವ ಸಂಸ್ಥೆಯ ತರಬೇತಿ ಕೇಂದ್ರವಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.: 9845077192, 9242981111ಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.