ಜ.21ಕ್ಕೆ ಪ್ರತಿಭಾ ಪುರಸ್ಕಾರ; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯೋಜನೆ

0
9

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿವರ್ಷದಂತೆ ಈ ವರ್ಷವು ಇದೇ ಜ.21ರಂದು ಬೆಳಗ್ಗೆ 10 ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿ ವರ್ಷದಂತೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಕಲಬುರಗಿ ಜಿಲ್ಲೆಯ ವೀರಶೈವ ಲಿಂಗಾಯತ್ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ರೂಪದಲ್ಲಿ 2,000 ನಗದು ಹಣ, ಪ್ರಶಸ್ತಿ, ಪತ್ರವನ್ನು ಒಳಗೊಂಡ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಈ ಪೆÇ್ರೀತ್ಸಾಹ ಕಾರ್ಯಕ್ರಮವು ಬರೀ ಕರ್ನಾಟಕದಲ್ಲಿ ಅಲ್ಲದೇ ನೆರಯ ತೆಲಂಗಣ, ಆಂದ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯದ ವಿದ್ಯಾರ್ಥಿಗಳಿಗೂ ಸಹ ಪ್ರತಿಬಾ ಪುರಸ್ಕಾರ ನೀಡಲಾಗುತ್ತಿದೆ. ಏಳು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜ ನವನ್ನು ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರತಿ ವರ್ಷ ಸುಮಾರು ಎರಡು ಕೋಟಿ ಮಹಾಸಭಾ ಕೊಡುತ್ತಿದೆ ಎಂದರು.

ಈ ಬಾರಿ ಎಸ್.ಎಸ್‍ಎಲ್.ಸಿಯಲ್ಲಿ 108 ಹಾಗೂ ಪಿಯುಸಿಯಲ್ಲಿ 87 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಂದು ನಡೆಯುವ ಸಮಾರಂಭಕ್ಕೆ ಸಚಿವರು, ಶಾಸಕರು, ಸಮಾಜದ ಹಿರಿಯರು, ಪೂಜ್ಯರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರತಿಭಾ ಪುರಸ್ಕಾರದ ಪದಾದಿಕಾರಿಗಳಾದ ಸೋಮಶೇಖರ ಹಿರೇಮಠ ಅವರ ಮೊಬೈಲ್ ಸಂಖ್ಯೆ 9916784466ಗೆ ಸಂಪರ್ಕಿಸಬೇಕೆಂದು ಶರಣಕುಮಾರ ಮೋದಿ ಅವರು ತಿಳಿಸಿದರು.

ಪ್ರತಿಭಾ ಪುರಸ್ಕಾರದ ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜುಗೌಡ ನಾಗನಳ್ಳಿ, ಮಹಾಸಭಾದ ಪದಾದಿಕಾರಿಗಳಾದ ಸಿದ್ದುಗೌಡ ಅಫಜಲಪುರಕರ್, ಸೋಮಶೇಖರ ಹಿರೇಮಠ, ಚೆನ್ನಪ್ಪ ದಿಗ್ಗಾವಿ, ಶಂಭುಲಿಂಗ ಪಾಟೀಲ್, ಬೀಮಾಶಂಕರ ಮಿಟೇಕರ್, ಜ್ಯೋತಿ ಮರಗೋಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here