ಕಲಬುರಗಿ: ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಅನುμÁ್ಠನಗೊಳಿಸುತ್ತಿರುವ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ ಹಾಗೂ ರೈತ ವಿಧವಾ ವೇತನ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆದೇಶದಲ್ಲಿರುವ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಆಧಾರ್ ಕಾರ್ಡ್‍ಗೂ ಮಿಸ್ ಮ್ಯಾಚ್ ಆಗಿರುವ ಪ್ರಯುಕ್ತ ಒಟ್ಟು 1,566 ಫಲಾನುಭವಿಗಳ ಪಿಂಚಣಿಯು ಸ್ಥಗಿತಗೊಂಡಿರುತ್ತದೆ ಎಂದು ಕಲಬುರಗಿ ತಹಶೀಲ್ದಾರರು ತಿಳಿಸಿದ್ದಾರೆ.
ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆದೇಶದಲ್ಲಿರುವ ಹಾಗೂ ಬ್ಯಾಂಕ ಖಾತೆಯಲ್ಲಿರುವ ಆಧಾರ ಕಾರ್ಡಗೂ ಮ್ಯಾಚ್ ಆಗಿರುವುದರಿಂದ ಅವರಾದ (ಬಿ)-136, ಫರಹತಾಬಾದ-133, ಕಲಬುರಗಿ ಗ್ರಾಮೀಣ-47, ಕಲಬುರಗಿ ನಗರ-1155, ಪಟ್ಟಣ-93 ಸೇರಿದಂತೆ ಒಟ್ಟು 1,566 ಫಲಾನುಭವಿಗಳ ಪಿಂಚಣಿಯು ಸ್ಥಗಿತಗೊಂಡಿರುತ್ತದೆ.
ಸ್ಥಗಿತಗೊಂಡ ಮೇಲ್ಕಂಡ ಫಲಾನುಭವಿಗಳ ಪಿಂಚಣಿಯನ್ನು ಪರಿಶೀಲಿಸಿ ಪುನಃ ಜಾರಿಗೊಳಿಸಲು ಕಲಬುರಗಿ ಹೋಬಳಿಯ ನಗರ ಮತ್ತು ಕಲಬುರಗಿ ತಾಲೂಕಿನ ಎಲ್ಲಾ ಹೋಬಳಿಯ ಫಲಾನುಭವಿಗಳು ತಮ್ಮ ಪಿಂಚಣಿಯ ಆದೇಶದ ಪ್ರತಿ, ಬ್ಯಾಂಕ್ ಖಾತೆಯ ಪುಸ್ತಕ ಹಾಗೂ ಆಧಾರ ಕಾರ್ಡ ದಾಖಲೆಗಳೊಂದಿಗೆ ಕಲಬುರಗಿ ತಹಶೀಲ್ದಾರರ ಕಚೇರಿಯಲ್ಲಿ 2024ರ ಜನವರಿ ಅಂತ್ಯದೊಳಗಾಗಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.