ಕಲಬುರಗಿ: ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷಚೇತನ ಮಕ್ಕಳ ಕ್ರೀಡಾಕೂಟದಲ್ಲಿ ನಮ್ಮ ಕಲಬುರಗಿ ಜಿಲ್ಲೆಯ ಸಕಾ೯ರಿ ಅಂಧ ಬಾಲಕರ ಪ್ರೌಢಶಾಲೆಯ ದೃಷ್ಟಿದೋಷವುಳ್ಳ ವಿಧ್ಯಾಥಿ೯ಯಾದ, ಕುಮಾರ ಬಸ್ಸಣ್ಣ ಮೀಣಜಗಿ ರಾಜ್ಯ ಮಟ್ಟದ ಜಾವಲೀನ್ ಥ್ರೋ ಸ್ಪಧೆ೯ಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಮತ್ತು ನಮ್ಮ ಶಾಲೆಗೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕೀತಿ೯ ಹೆಚ್ಚಿಸಿದ್ದಾನೆ.
ಕಲಬುರಗಿ ಜಿಲ್ಲೆಯ ಸಕಾ೯ರಿ ಅಂಧ ಬಾಲಕರ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಪ್ರಕಾಶ್ ಭಜಂತ್ರಿ ಅವರ ತರಬೇತಿಯಿಂದ ವಿದ್ಯಾರ್ಥಿ ರಾಜ್ಯ ಮಟ್ಟದಲ್ಲಿ ಕಲಬುರಗಿ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆಂದು ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ಹಾಗೂ ಸಕಾ೯ರಿ ಅಂಧ ಬಾಲಕರ ಪ್ರೌಢಶಾಲೆಯ ಆಧೀಕ್ಷಕರಾದ ಸಾದಿಕ್ ಹುಸೇನ್ ಖಾನ್ ಮತ್ತು ಶಾಲಾ ಸಿಬ್ಬಂದಿಗಳು ಅಭಿನಂದನೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.