ಆನೆಕಾಲು ರೋಗನಿಯಂತ್ರಣಕ್ಕೆ ಮಾತ್ರೆಗಳು ಅತ್ಯಂತ ಸುರಕ್ಷಿತ; CEO ಭಂವರ್ ಸಿಂಗ್ ಮೀನಾ

0
23

ಕಲಬುರಗಿ; 2 ವರ್ಷದ ಕೆಳಗಿನ ಮಕ್ಕಳು, ಗರ್ಭೀಣಿ ಸ್ತ್ರೀಯರು ಹಾಗೂ ದೀರ್ಘಕಾಲದರೋಗದಿಂದ ಬಳಲುತ್ತಿರುವರನ್ನು ಹೊರತ್ತು ಪಡಿಸಿ, ಮಾತ್ರೆಗಳನ್ನು ನುಂಗಬಹುದಾಗಿದೆ.ಈ ಮಾತ್ರೆಗಳು ಅತ್ಯಂತ ಸುರಕ್ಷಿತವಾಗಿದ್ದು, ನಮ್ಮ ಮುಂದಿನ ಪೀಳಿಗೆ ಈ ರೋಗದಿಂದ ಬಳಲುಬಾರದೆಂದು ಈ ಮಾತ್ರೆಗಳನ್ನು ನುಂಗಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾ ಅವರು ಹೇಳಿದರು.

ಗುರುವಾರದಂದು 2023-24ನೇ ಜಿಲ್ಲೆಯಲ್ಲಿ 6 ತಾಲ್ಲೂಕಿನ 7 ಬ್ಲಾಕ್‍ಗಳಲ್ಲಿ ಸಾಲಿಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಕಲಬುರಗಿ ತಾಲ್ಲೂಕಿನ ಫರತಾಬಾದ ಸರಕಾರಿ ಫ್ರೌಢಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಳೆದ 19 ವರ್ಷದಿಂದ ಕಲಬುರಗಿ ಜಿಲ್ಲೆಯಲ್ಲಿ ಆನೆಕಾಲು ರೋಗ ನಿಯಂತ್ರಣ ಮತ್ತು ಮುಂಜಾಗ್ರತೆ ಕ್ರಮವಾಗಿ ಹಾಗೂ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ನಿಮ್ಮ ಮನೆಗೆ ಬಂದಾಗ ಊಟದ ನಂತರ ಮಾತ್ರೆಗಳನ್ನು ಅವರ ಸಮ್ಮುಖದಲ್ಲಿಯೇ ನುಂಗಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ರತಿಕಾಂತ ವ್ಹಿ ಸ್ವಾಮಿ ಮಾತನಾಡಿ, ಸಾಮಾನ್ಯವಾಗಿ ಕೊಳಚೆ ನಿಂತ ನೀರಿನಲ್ಲಿ ಮೋಟ್ಟೆಗಳನ್ನು ತಮ್ಮ ಸಂತಾನೋತ್ಪಿ ಮಾಡಲು ಕೂಲೇಕ್ಸ್ ಸೊಳ್ಳೆ ತನ್ನಆಹಾರಕ್ಕಾಗಿ ರಕ್ತ ಹೀರುವಂತಹ ಸಂಭರ್ದದಲ್ಲಿ ಮೈಕ್ರೋ ಫೈಲೇರಿಯಾ ಜಂತುಗಳನ್ನು ಹೀರಿಕೊಂಡು ಆರೋಗ್ಯವಂತಹ ವ್ಯಕ್ತಿಗಳಿಗೆ ಕಚ್ಚಿರೋಗವನ್ನು ಒಬ್ಬರಿಂದ ಒಬ್ಬರಿಗೆ ಹರಡಿಸುತ್ತವೆ. ಆದಕಾರಣ ಸಾರ್ವಜನಿಕರು ಈ ಮಾತ್ರೆಗಳನ್ನು ನುಂಗುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆಂದು ತಿಳಿಸಿದರು.

ಕಾರ್ಯಕ್ರದಲ್ಲಿ ಜಿಲ್ಲಾ ವಿಬಿಡಿಸಿ ಅಧಿಕಾರಿ ಡಾ.ಬಸವರಾಜ ಗುಳಗಿ, ತಾಲ್ಲೂಕಾಆರೋಗ್ಯ ಅಧಿಕಾರಿ ಡಾ.ಮಾರುತಿ ಕಾಂಬಳೆ ಫರತಾಬಾದ ಪ್ರಾಥಮಿಕ್ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ, ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜದೊಡಮನಿ, ಕರ್ಣಿಕಕೋರೆ, ಗಣೇಶ ಚಿನ್ನಾಕಾರ ಚಂದ್ರಕಾಂv Àಏರಿ, ಪ್ರಾಚಾರ್ಯರಾದ ಬಸವರಾಜ ತಳವಾರ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here