ಕೋಲಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕ,ಸಾಮಾಜಿಕ, ಹಿಂದುಳಿದ ಸಮಾಜವಾಗಿದೆ; ಸಂಸದ ಡಾ.ಉಮೇಶ ಜಾಧವ

0
22

ಕಲಬುರಗಿ: ಕೋಲಿ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕ, ಸಾಮಾಜಿಕ, ಹಿಂದುಳಿದ ಸಮಾಜವಾಗಿದೆ ನಾವೆಲ್ಲರೂ ಪಕ್ಷ ಬೇದ ಮರೆತು ಒಂದಾಗಿ ಸಮುದಾಯದ ಜನರನ್ನು ಮುಂದೆ ತರುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದು. ಸಂಸದರಾದ ಡಾ. ಉಮೇಶ ಜಾಧÀವ ಹೇಳಿದರು.

ರವಿವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಕೋಲಿ ಮತ್ತು ಕಬ್ಬಲಿಗ ಒಂದೇ ಜಾತಿಯಾಗಿದ್ದು, ಇವುಗಳನ್ನು ಎಸ್.ಟಿ.ಗೆ ಸೇರಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.

ನಾವೆಲ್ಲರೂ ಹಿಂದುಳಿದ ಜನಾಂಗಗಳಿದ್ದು, ಸರ್ಕಾರ ಸಿಗುವಂತ ಸೌಲಭ್ಯ ಪಡೆದುಕೊಳ್ಳಬೇಕೆಂದರು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಅವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಒಂದ ಟೌನ್ ಹಾಲಿ ಹತ್ತಿರ ಮಹಾತ್ಮ ಗಾಂಧೀಜಿಯವರ ಮೂರ್ತಿಯ ಪಕ್ಕದಲ್ಲಿಯೇ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಮಾತು ಕೊಟ್ಟಿದ್ದಾರೆ. ಈಗಾಗಲೇ ಟೆಂಡರ್ ಕರೆದಿದ್ದು, ನಾಳೆ ಅಂತಿಮಗೊಳ್ಳಲಿದ್ದು ನಗರ ನಗರ ಸಭೆಯಿಂದ 20 ಲಕ್ಷ ಹಣ ಬಿಡುಗಡೆಯಾಗಿದ್ದು, ಅದರ ರೂಪರೇಷಗಳನ್ನು ತಯಾರು ಮಾಡಲಾಗಿದೆ ಎಂದರು. ಅದೇ ರೀತಿಯಾಗಿ ಬೆಂಗಳೂರಿನ ವಿಧಾನ ಸೌಧ ಎದುರಗಡೆ ಕೆಂಪೇಗೌಡ ಮೂರ್ತಿ, ಬಸವಣ್ಣನವರ ಮೂರ್ತಿ ಪಕ್ಕದಲ್ಲಿ ಶ್ರೀ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾನ ಮಾಡಲು ನಮ್ಮ ಸರ್ಕಾರ ಅನುಮತಿ ನೀಡಿದೆ ಎಂದರು.

ಅದೇ ರೀತಿಯಾಗಿ ಸರ್ಕಾರ ಐದು ಗ್ಯಾರೆಂಟಿ ಫೋಷಣೆ ಮಾಡಿದೆ. ಅದೇ ರೀತಿಯಾಗಿ ನಮ್ಮ ಸಮುದಾಯಕ್ಕೆ ವಿಶೇಷ ಪ್ಯಾಕೆಜ್‍ನಲ್ಲಿ ನಮ್ಮ ಸಮುದಾಯಕ್ಕೆ ಅನುದಾನ ಪೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಅಂಬಿಗರ ಚೌಡಯ್ಯರರನ್ನು ಬಸವಣ್ಣ ಕರ್ನಾಟಕ ಸಾಂಸ್ಕøತಿ ನಾಯಕ ಬಿಂಬಿಸಿದ ಹಾಗೆ ಕಲ್ಯಾಣ ಕರ್ನಾಟಕ ಸಾಂಸ್ಕøತಿ ನಾಯಕ ಎಂದು ಬಿಂಬಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅಂಬಿಗರ ಚೌಡಯ್ಯನವರ ನಿಗಮದಿಂದ 200 ಕೋಟಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಆಗ್ರಹಿಸಿದರು. ಮೀನುಗಾರಿಕೆಯಲ್ಲಿ ಶೇಕಡ 90 ರಷ್ಟು ನಮ್ಮ ಸಮುದಾಯಕ್ಕೆ ಜಾಹೀರಾತುಗಳನ್ನು ನೀಡಬೇಕೆಂದರು.

ನಾವೆಲ್ಲರೂ ಅಂಬಿಗರ ಚೌಡಯ್ಯರವರು ಆದರ್ಶ ತತ್ವಗಳನ್ನು ನಾವು ಪಾಲಿಸಿಕೊಂಡು ನಡೆಯಬೇಕೆಂದರು. ಸರ್ಕಾರದಿಂದ ಅನೇಕ ಸವಲತ್ತುಗಳನ್ನು ನಾವು ಪಡೆದುಕೊಳ್ಳಬೇಕೆಂದರು.

ಧಾರವಾಡ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ, ತತ್ವಶಾಸ್ತ್ರ ಹಾಗೂ ಯೋಗ ವಿಜ್ಞಾನ ಡಾ. ಬಿ.ಪಿ. ಸಿದ್ದಾಶ್ರಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಲ್ಲಮಪ್ರಭುರವರು ಬಸವಣ್ಣನವರ ಅನುಭವ ಮಂಟಪದಲ್ಲಿ ನೇರ ನುಡಿ ವ್ಯಕ್ತಿತ್ವ ಹೊಂದಿ ವ್ಯಕ್ತಿಯೆಂದು ಹೊಗಳುತ್ತಿದ್ದರು. ಕೆಳವರ್ಗದವರ ಅನ್ಯಾಯಕ್ಕೆ ಹೋರಡಿದರು. ಸರಳ ಭಾಷೆಯಲ್ಲಿ ಅನೇಕ ವಚನಗಳನ್ನು ಬರೆದರು. ಬಹಳ ದೊಡ್ಡ ಯೋಗಿ, ಹಾಗೂ ಸಂತ, ಬಹಳ ದೊಡ್ಡ ತತ್ವಜ್ಞಾನಿಯಾಗಿದ್ದರು ನಾವೆಲ್ಲರೂ ಅಂಬಿಗರ ಚೌಡಯ್ಯ ಆದಶ್ ತತ್ವಗಳನ್ನು ಪಾಲಿಸಬೇಕೆಂದರು.

ತೊನಸನಳ್ಳಿ ಅಲ್ಲಪ್ರಭು ಸಂಸ್ಥಾನ ಮಠ, ಮಹಾಸ್ವಾಮಿಗಳಾ ಡಾ. ಪೂಜ್ಯ ಶ್ರೀ ಮಲ್ಲಣಪ್ಪ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಬಸವರಾಜ ಹನುಮಂತಪ್ಪ ಬೂದಿಹಾಳ ಮಾತನಾಡಿದರು.

ವೇದಿಕೆ ಮೇಲೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಯಾನಂದ ಪಾಟೀಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸಮಾಜ ಮುಖಂಡರಾದ ರಾಜಗೋಪಲ ರೆಡ್ಡಿ, ಶಿವಶರಣಪ್ಪ ಕೋಬಾಳ, ದೇವಿಂದಪ್ಪ ಬ್ಯಾಡಿಹಾಳ, ಬಸವರಾಜ ಹರವಾಳ, ಸಂತೋóಷ ತಳವಾರ ಸೇರಿದಂತೆ ಜಿಲ್ಲಾಮಟ್ಟ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here