ಕಲಬುರಗಿ: ನಗರದ ಸುಪ್ರಸಿದ್ಧ ಖಾಜಾ ಶಿಕ್ಷಣ ಸಂಸ್ಥೆಯ ಬಿ ಬಿ ರಜಾ ಪದವಿ ಮಹಾವಿದ್ಯಾಲಯವು ನ್ಯಾಕ ನಿಂದ್ A+ ಗ್ರೇಡ್ ಪಡೆದಿದೆ ಎಂದು ಪ್ರಿನ್ಸಿಪಾಲ ಡಾ ಝೆಬಾ ಪರ್ವೀನ ತಿಳಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಅಲ್ಪಸಂಖ್ಯಾತ ಸಮುದಾಯದ ಮಹಾವಿದ್ಯಾಲಯಕ್ಕೆ ಇದೇ ಮೊದಲ ಬಾರಿ ನ್ಯಾಕ್ ಎ+ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನ್ಯಾಕ್ ವೀಕ್ಷಕರ ತಂಡಕ್ಕೆ ಕಾಲೇಜಿನ ಸ್ವಚ್ಛತೆ, ಶಿಸ್ತು, ಗುಣಮಟ್ಟದ ಶಿಕ್ಷಣ ಮತ್ತು ಫಲಿತಾಂಶ ಗಮನ ಸೆಳೆದಿದ್ದು, ಈ ಮಾನದಂಡದ ಮೇಲೆ ಎ+ ದೊರೆತಿದೆ ಎಂದರು.
ನಗರದ ಸುಪ್ರಸಿದ್ಧ ಖಾಜಾ ಶಿಕ್ಷಣ ಸಂಸ್ಥೆ ಸುಮಾರು ವರ್ಷಗಳಿಂದ ಸಮಾಜದಲ್ಲಿ ಶಿಕ್ಷಣ ಸೇವೆಯಲ್ಲಿ ನಿರತವಾಗಿದೆ. ಅಲ್ಲದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದೆ. ಬಿ ಬಿ ರಜಾ ಮಹಿಳಾ ವಿದ್ಯಾಲಯ 47 ವರ್ಷಗಳ ಹಿಂದೆ ಸ್ಥಾಪಿಸಲಾಯಿತು.
1977 ರಲ್ಲಿ ಕಲಾ ಮಹಾವಿದ್ಯಾಲಯ ಮತ್ತು 1989 ರಲ್ಲಿ ವಿಜ್ಞಾನ ವಿಷಯಗಳನ್ನು ಪ್ರಾರಂಭಿಸಲಾಯಿತು. ಇದುವರೆಗೆ ಸುಮಾರು ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ರಾಜ್ಯ ಮತ್ತು ದೇಶದ ವಿವಿಡೆದೆ ಅನೇಕ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಖಾಜಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಗೌರವಾನ್ವಿತ ಹಜರತ ಸಯ್ಯದ ಶಾಹ್ ಮುಹಮ್ಮದ ಅಲ್ ಹುಸ್ಸೇನಿ ಶಿಕ್ಷಣ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಪದ್ಮಶ್ರೀ ಪುರಸ್ಕಾರವೂ ಸಹ ಪಡೆದಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಸಯ್ಯದ ಶಾಹ ಖುಸ್ರೋ ಹುಸ್ಸೇನಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾಗಿದ್ದಾರೆ.
ಈ ಸಾಲಿನ ನ್ಯಾಕ ಸಮಿತಿ ಡಾ ಎಂ. ಭಾಸ್ಕರ್ ಅಧ್ಯಕ್ಷತೆಯಲ್ಲಿನ ಪ್ರೊ. ತನುಜಾ, ಪ್ರೆಸಿಡೆನ್ಶಿ ಕಾಲೇಜು ಕೊಲ್ಕತ್ತಾˌ ಪ್ರೊ. ಮಂಜು ಜೈನ ಕಾಲೇಜ್ ಆಫ್ ಎಜುಕೇಶನ್ ಹರ್ಯಾಣ ರವರನ್ನು ಒಳಗೊಂಡಿತ್ತು.
ಸೆಪ್ಟೆಂಬರನಲ್ಲಿ 2 ದಿನಗಳ ಇನ್ಸ್ಪೆಕ್ಷನ ನಡೆಯಿತು. ಈ ಸಾಲಿನಲ್ಲಿ 700 ವಿದ್ಯಾರ್ಥಿಗಳಿದ್ದು, 18 (ಕಲಾ-9 ಮತ್ತು ವಿಜ್ಞಾನ-9) ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. 29 ಉಪನ್ಯಾಸಕರು ಪಿಎಚ್ಡಿ ಪದವಿದರರು ಇದ್ದಾರೆ. ಸಮಿತಿ ಎಲ್ಲಾ ವಿಭಾಗಗಳ ಕಡತಗಳನ್ನು ಕುಲಂಕಶವಾಗಿ ಪರಿಶೀಲಿಸಿತು. ಅಲ್ಲದೇ ಎಲ್ಲ ವಿಭಾಗಗ ಪಿಪಿಟಿ ಪ್ರಸ್ತುತಿ ವೀಕ್ಷಿಸಿ ವಿಭಾಗಗಳನ್ನು ಭೇಟಿ ನೀಡಿದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಜೊತೆ ಹಾಗೂ ಪಾಲಕರ ಜೊತೆಗೆ ಸುಮಾಲೋಚನೆ ನಡೆಸಿದರು. ಕಾಲೇಜಿನ ಸ್ಟೂಡಿಯೋ, ಬಹುಮಧ್ಯಮ ಲ್ಯಾಬ್, ಪ್ರೊಜೆಕ್ಟರ್ ರೂಮ, ಐಸಿಟಿ ಲ್ಯಾಬ್, ಇಂಗ್ಲಿಷ್ ಲೈಬ್ರರಿ ಮುಖ್ಯ ಆಕರ್ಷಣೆಯಾಗಿದ್ದವು.
ಸಂಸ್ಥೆಯ ಅಧ್ಯಕ್ಷರಾದ ಡಾ. ಸಯ್ಯದ ಶಾಹ ಖುಸ್ರೋ ಹುಸ್ಸೇನಿˌ ಉಪಾಧ್ಯಕ್ಷ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ, ಪ್ರಾಂಶುಪಾಲ ಡಾ. ಝೆಬಾ ಪರ್ವೀನ ಹಾಗೂ ಸಮಸ್ತ ಶಿಕ್ಷಕ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸದಾ ಪ್ರೋತ್ಸಾಹಿಸಿ ಸಹಕಾರ ನೀಡಿದ ಆಡಳಿತ ಮಂಡಳಿಗೆ ಮತ್ತು ಅವಿರತ ಪರಿಶ್ರಮ ಮಾಡಿದ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಪ್ರಾಂಶುಪಾಲರು ಧನ್ಯವಾದಗಳನ್ನು ಹೇಳಿದ್ದಾರೆ.
ಈ ಪತ್ರಿಕಾ ಗೋಷ್ಠಿಯಲ್ಲಿ ಡಾ ಕನಿಜ ಫಾತಿಮಾ, ಡಾ ನಯ್ಯರ್ ಜಹಾನ್, ಡಾ ಬಿ ಜ್ಯೋತಿ ಮತ್ತು ಡಾ ನಮ್ರತಾ ರಾವುತ್ ಹಾಜರಿದ್ದರು.