ಕೆಎಂಎಫ್ ಬಳಿ ಗಾಂಜಾ ಮಾರಾಟ: ಓರ್ವನ ಸೆರೆ

0
46

ಕಲಬುರಗಿ: ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಭಾತ್ಮಿ ಮೇರೆಗೆ ಪೋಲಿಸರು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ನಗರದ ಹಾಲು ಒಕ್ಕೂಟ ಮಂಡಳಿ ಕಚೇರಿಯ ಹತ್ತಿರ ವರದಿಯಾಗಿದೆ.

ಬಂಧಿತನಿಗೆ ನಗರದ ಬಾಪು ನಗರದ ಮಾಂಗರವಾಡಿಯ ನಿವಾಸಿ ಮೊಹ್ಮದ್ ರುಕ್ನುದ್ದೀನ್ ಬಹದ್ದೂರ್ ತಂದೆ ಅಬ್ದುಲ್ ಅಜೀಮ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ೪೫೦೦೦ರೂ.ಗಳ ಮೌಲ್ಯದ ೫ ಕೆಜಿ ೭೦೦ ಗ್ರಾಮ್ ಗಾಂಜಾವನ್ನು ಪೋಲಿಸರು ಜಪ್ತಿ ಮಾಡಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಇನ್ನೋರ್ವ ಆರೋಪಿ ಬಾಪುನಗರದ ಮಾಂಗರವಾಡಿ ಪ್ರದೇಶದ ನಿವಾಸಿ ಸಮೀರಖಾನ್ ತಂದೆ ನಸೀರಖಾನ್ (೨೪) ಎಂಬಾತನು ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯು ಬೀದರ್ ನಗರದ ಇರಾನಿ ಗಲ್ಲಿಯ ಫಿರೋಜ್ ಅಲಿ ತಂದೆ ರಾಯಕ್ ಅಲಿ ಇರಾನಿ ಎಂಬಾತನು ಮಾರಾಟ ಮಾಡಲು ಗಾಂಜಾ ತಂದುಕೊಡುತ್ತಿದ್ದ ಎಂದು ಪೋಲಿಸರ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ.

Contact Your\'s Advertisement; 9902492681

ಉಪ ವಿಭಾಗದ ಸಹಾಯಕ ಆಯುಕ್ತ ಪಾಂಡುರಂಗಯ್ಯ ಅವರ ನೇತೃತ್ವದಲ್ಲಿ ಪಿಐ ಸಂಜೀವಕುಮಾರ್, ಸಿಬ್ಬಂದಿಗಳಾದ ಎನ್. ಕುಂಬಾರಗೆರೆ, ವೇದರತ್ನಂ, ಬಾಬು ಪಾಟೀಲ್, ಶಶಿಕಾಂತ್ ಅವರು ಕಾರ್ಯಾಚರಣೆ ನಡೆಸಿದರು. ಈ ಕುರಿತು ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತು ನಿಯಂತ್ರಣ ವಿಶೇಷ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here