ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ ಜಯಂತ್ಯೋತ್ಸವ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ನೇಮಿರಾಜ್ ನಾಯ್ಕ್ , ನಂದಿಪುರದ ಸ್ವಾಮಿಗಳು, ದಲಿತ ವಿದ್ಯಾರ್ಥಿ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀನಾಥ್ ಪೂಜಾರ್, ಜಿಲ್ಲಾಧ್ಯಕ್ಷರಾದ ಹನುಮೇಶ್, ತಾಲೂಕಾಧ್ಯಕ್ಷರಾದ ಬಿ ಬಿ ಜಿ ಗೌತಮ್, ರಾಮ ನಾಯ್ಕ್, ಬಾಬಾ ಬಿ ಬಿ ಜಿ, ರಾಘು ಆಗಮಿಸಿದರು.
ಮಾನ್ಯ ಶಾಸಕರು ಕಾರ್ಯಕ್ರಮ ಉದ್ದೇಶಿಸಿ ಮಾತಾಡುತ್ತಾ, ಇಂದಿನ ಹೆಣ್ಣು ಮಕ್ಕಳು ನೆನೆಯಬೇಕು, ಈ ಇಬ್ಬರು ಮಹಾನ್ ಚೇತನಗಳನ್ನು ಇಂದಿನ ಹೆಣ್ಣು ಮಕ್ಕಳು ಅದರ್ಶವಾಗಿಟ್ಟುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ಹೇಳಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಕೆ. ವೆಂಕಟೇಶ್, ಸುಧಾ ಚಿದಾನಂದಗೌಡ, ಹನುಮಕ್ಕ, ಸಿ. ಹೆಚ್.ಲೋಕಪ್ಪ, ಎಂ.ಪಿ ಮಂಜುನಾಥ ರವರು ಉಪಸ್ಥಿತಿಯಲ್ಲಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಎಂ ರಾಜು ನಿರ್ವಹಿಸಿದರು.