ಫೆ. 3 ರಂದು 75ನೇ ಸಂವಿಧಾನ ದಿನಾಚಾರಣೆ; ಭೀಮರತ್ನ ಪ್ರಶಸ್ತಿ ಪ್ರದಾನ

0
24

ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಮನ್ನೂರು ಆಸ್ಪತ್ರೆ ವತಿಯಿಂದ ಫೆಬ್ರುವರಿ 03 ರಂದು ಸಾಯಂಕಾಲ 5:00 ಗಂಟೆಗೆ ನಗರದ ಅನ್ನಪೂರ್ಣ ಕ್ರಾಸ್‍ನಲ್ಲಿರುವ ಕಲಾಮಂಡಲದಲ್ಲಿ 75ನೇ ಸಂವಿಧಾನ ದಿನಾಚಾರಣೆ ಹಾಗೂ ಭೀಮರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸಚೀನ ಪರಹತಾಬಾದ ಹೇಳಿದರು.

ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ಮಹಾಲಕ್ಷ್ಮೀ ಶಕ್ತಿಪೀಠ ಸುಕ್ಷೇತ್ರ ನದಿಸಿನೂರ ಅವರು ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸುವರು, ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು, ಪ್ರಗತಿಪರ ವಿಚಾರವಾದಿ ಡಾ. ಅನೀಲ ಟೆಂಗಳಿ ಅವರು ವಿಶೇಷ ಭಾಷಣಕಾರರಾಗಿ ಆಗಮಿಸುವರು, ಮನ್ನೂರು ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಅಹ್ಮದ್ ಮನ್ನೂರ ಅವರು ಅಧ್ಯಕ್ಷತೆ ವಹಿರುವರು, ಮೇಯರ್ ವಿಶಾಲ ಧರ್ಗಿ ಡಾ: ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಪೂಜೆ ಸಲ್ಲಿಸುವರು, ಕೆ.ಪಿ.ಸಿ.ಸಿ. ಸದಸ್ಯ ನೀಲಕಂಠರಾವ ಮೂಲಗೆ ಭೀಮರತ್ನ ಪ್ರಶಸ್ತಿ ಪ್ರಧಾನ ಮಾಡುವರು.

Contact Your\'s Advertisement; 9902492681

ಸುರೇಶ ಬಡಿಗೇರ, ಅನೀಲ ಡೊಂಗರಗಾಂವ, ಕು. ರೇಣುಕಾ ಪಿ. ಹೋಲ್ಡರ್, ಗೀತಾ ಮುದಗಲ್, ಎಮ್.ಡಿ. ಸಿದ್ದಿಕ್ಕಿ, ಸಂತೋಷ ಹಾದಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ದಲಿತ ಹಿರಿಯ ಮುಖಂಡ ಪ್ರಕಾಶ ಮೂಲಭಾರತಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ದಲಿತ ಯುವ ಮುಖಂಡ ಲಕ್ಷ್ಮಣ ಮೂಲಭಾರತಿ, ಕಾಂಗ್ರೇಸ್ ಎಸ್.ಸಿ. ವಿಭಾಗೀಯ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಮಾಜಿ ಸಿಂಡಿಕೇಟ್ ಸದಸ್ಯ ಸುನೀಲ ವಂಟಿ, ದಲಿತ ಹಿರಿಯ ಮುಖಂಡ ಎಸ್. ಎಮ್. ಪಟ್ಟಣಕರ್, ನ್ಯಾಯವಾದಿ ರಾಜೇಶ ಶಿವಶರಣಪ್ಪ, ಪಾಳಾದ ಸ.ಪ್ರಾ. ಶಾಲೆಯ ಸಹಶಿಕ್ಷಕಿ ಗೀತಾ ಭರಣಿ ಇವರು ಭೀಮರತ್ನ ಪ್ರಶಸ್ತಿ ಪ್ರಧಾನಕ್ಕೆ ಆಯ್ಕೆಯಾಗಿದ್ದಾರೆ. ಎಂದು ಪರಹತಾಬಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here