ಕಲಬುರಗಿ: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯ ವತಿಯಿಂದ ವಿಜ್ಞಾನ ಕೇಂದ್ರದ ಅಡಿಯಲ್ಲಿ ನಡೆಸಲಾದ ಜನವರಿ 30 ಮತ್ತು 31 ಎರಡು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರೌಢ ಶಾಲಾ ವಿಭಾಗದಿಂದ ಸ್ಮಾರ್ಟ ಕೃಷಿಯಲ್ಲಿ ರಸಗೊಬ್ಬರದ ಸದ್ಬಳಕೆ ಹಾಗೂ ಸ್ಮಾರ್ಟ ಕೃಷಿ ಚಟುವಟಿಕೆ ಕುರಿತ ಮಾದರಿಯೊಂದಿಗೆ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿನಿಗಳಾದ ಕುಮಾರಿ ರೀತು ಮಂಜುನಾಥ ಮತ್ತು ಕುಮಾರಿ ವಿಭಾ ನಿರಂಜನ ಅವರು ಶಾಲೆಯ ವಿಜ್ಞಾನ ಶಿಕ್ಷಕರಾದ ಶರಣಬಸಪ್ಪ ಬಾವಗಿ ಮತ್ತು ಸಂಪದಾ ಬುಕ್ಕಾ ಇವರ ಮಾರ್ಗದರ್ಶನದಡಿಯಲ್ಲಿ ಭಾಗವಹಿಸಿದ್ದರು.
ಈ ವಿಜ್ಞಾನ ಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿನಿಗಳಾದ ಕುಮಾರಿ ರೀತು ಮಂಜುನಾಥ ಮತ್ತು ಕುಮಾರಿ ವಿಭಾ ನಿರಂಜನ ಅವರು ಪ್ರಥಮ ಸ್ಥಾನ ಪಡೆದು, ಶಾಲೆಗೆ ಕಿರ್ತೀ ತಂದಿದ್ದಾರೆ.
ಆದ್ದರಿಂದ ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಡಿ ರಘೋಜಿ, ಕಾರ್ಯದರ್ಶಿಗಳಾದ ಮೀರಾ ಆರ್ ರಘೋಜಿ, ಟ್ರಸ್ಟೀಗಳಾದ ಕುಮಾರಿ ಮನೋಶ್ರೀ ಆರ್ ರಘೋಜಿ, ನಂದಿನಿ ಆರ್ ರಘೋಜಿ, ವಿಷ್ಣು ಕೆಲೋಜಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಪ್ರಮೋದ ಎಸ್ ಮಳೇಕರ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.