ಸುರಪುರ: ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಕೇಂದ್ರ ಕಚೇರಿಯನ್ನು ಬೆಂಗಳೂರಿನ ಪೀಣ್ಯ ಮೊದಲ ಹಂತದ ಬಳಿ ತೆರೆಯಲಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ತಿಳಿಸಿದ್ದಾರೆ.
ಕೇಂದ್ರ ಕಚೇರಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಚೇರಿ ಆರಂಭಿಸಲಾಗಿದೆ,ಮುಂಬರುವ ದಿನಗಳಲ್ಲಿ ವಿವಿಧ ಸ್ವಾಮೀಜಿಗಳು, ಸಚಿವರು, ಶಾಸಕರನ್ನು ಹಾಗೂ ಸಮಾಜದ ಮುಖಂಡರನ್ನು ಆಹ್ವಾನಿಸಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿ,ಸಂಘದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ,ತಾಲೂಕು,ಹೋಬಳಿ ಹಾಗೂ ಗ್ರಾಮಗಳಲ್ಲೂ ಶಾಖೆಯನ್ನು ಆರಂಭಿಸಲಾಗುವುದು,ಆ ನಿಟ್ಟಿನಲ್ಲಿ ಜಿಲ್ಲಾ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿ,ರಾಜ್ಯಾದ್ಯಂತ ವೀರಶೈವ ಲಿಂಗಾಯತ ಸಮುದಾಯದ ಅಭಿವೃಧ್ಧಿಗಾಗಿ ಎಲ್ಲ ಗುರು ಹಿರಿಯರ ಮಾರ್ಗದರ್ಶನ ಮತ್ತು ಸಂಘದೊಂದಿಗೆ ಕೈಜೋಡಿಸಲು ವಿನಂತಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಬಸವರಾಜರೆಡ್ಡಿ ಉಟಕೂರ, ಮಹೇಶರೆಡ್ಡಿ,ಶರಣು ಬಳಿ ಜಾಲಿಬೆಂಚಿ,ಆನಂದರೆಡ್ಡಿ ಮಾಲಗತ್ತಿ ಉಪಸ್ಥಿತರಿದ್ದರು.
ಅಕವೀಲಿಂ ಸಮಾಜ ರಾಜ್ಯ ಪ್ರ.ಕಾ ಶರಣು ಬಳಿ ನೇಮಕ; ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಯುವ ಸಂಘಟಕ ಶರಣು ಬಳಿ ಜಾಲಿಬೆಂಚಿ ಅವರನ್ನು ನೇಮಕಗೊಳಿಸಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಆದೇಶ ಹೊರಡಿಸಿದ್ದಾರೆ.ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆಗೊಳಿಸಿ ಘೋಷಿಸಿದ್ದಾರೆ.