ಶಹಾಪುರ : ಇದೆ ತಿಂಗಳು ಹದಿನೈದರಂದು ನಗರದಲ್ಲಿ ನಡೆಸಲು ಉದ್ದೇಶಿರುವ ಬೇಡ ಜಂಗಮ ಸಮಾವೇಶ ಉದ್ದೇಶವೆ ಗೊಂದಲಮಯವಾಗಿದೆ ಎಂದು ಬಿ.ಜೆ.ಪಿ. ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಗೂಗಲ್ ಈ ಮೀಡಿಯಾಗೆ ತಿಳಿಸಿದರು.
ಜಂಗಮರನ್ನು ಕಾಲಾನು ಕಾಲದಿಂದ ಲಿಂಗಾಯತ ಸಮಾಜ ಗೌರವ ಭಕ್ತಿಗಳಿಂದ ಕಾಣುತ್ತ ಬಂದಿದೆ. ಜಂಗಮರಿಗೆ ಗೌರವ ಭಕ್ತಿಗಳಿಂದ ಹಣೆ ಮಣಿದು ಅವರಿಗೆ ಗುರುವಿನ ಸ್ಥಾನ ನೀಡಲಾಗಿದೆ.
ಸರಕಾರಿ ಸೌಲತ್ತುಗಳಿಗಾಗಿ ಲಿಂಗಾಯತ ಜಂಗಮರು ಬೇಡ ಜಂಗಮರೆಂದು ಹೊರಟಿರುವುದು ಸ್ವಾರ್ಥಕ್ಕಾಗಿ. ಅಸಲಿಗೆ ಮಾಲಾ ಜಂಗಮ, ಬುಡ್ಗ ಜಂಗಮರೆ ಇವರಲ್ಲ. ನಮ್ಮ ಜೊತೆ ಇರುವವರು ಲಿಂಗಾಯತ ಜಂಗಮರು. ತಮ್ಮ ಮೂಲವನ್ನು ಮರೆತು ಲಿಂಗಾಯತರಿಂದ ದೂರ ಸರಿದು ಹೋಗುತ್ತೇವೆ ಅನ್ನುವವರಿಗೆ ಯಾರೂ ಹಿಡಿಯಲಾರರು ಎಂದರು.
ಸಮಾಜಕ್ಕೆ ಗುರುವಾಗಿರುವವರೆ ಭಕ್ತರನ್ನು ತೊರೆದು ಹೋಗುವುದು ಧರ್ಮ ವಿಭಜನೆಗೆ ಕಾರಣವಾಗುತ್ತದೆ. ಪ್ರಾಸಂಗಿಕವಾಗಿ ವೀರಶೈವ/ ಲಿಂಗಾಯತ ಹಿಂದೆ ಲಿಂಗಿ ಬ್ರಾಹ್ಮಣ ಎಂದು ಕರೆಯಿಸಿಕೊಂಡವರು, ಈಗ ಬುಡ್ಗ ಜಂಗಮರೆಂದು ಕರೆಯಿಸಿಕೊಳ್ಳಲು ಹೊರಟಿರುವುದು ಅತ್ಯಂತ ಖೇದದ ಸಂಗತಿ ಎಂದು ತಿಳಿಸಿದರು. ಅಸಲಿಗೆ ಜಂಗಮರು ಬುಡ್ಗ ಜಂಗಮ,ಮಾಲಾ ಜಂಗಮರು ಯಾವಾಗ ಆದರು ? ಎಂದು ಪ್ರಶ್ನಿಸಿದರು.
ಜಂಗಮರನ್ನು ಹೊರತು ಪಡಿಸಿಯೂ ಲಿಂಗಾಯತ ಸಮಾಜ ಸದೃಢವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಹೋದರ…..
ವಿಷಯ ಮರೆಮಾಚಿ ಸುಮಾರು 80 ವರ್ಷಗಳು (8 ತಲೆಮಾರು) ನಮ್ಮನ್ನು ಅಧಿಕಾರಿಗಳು ವಂಚನೆ ಮಾಡಿದ್ದಾರೆ, ಸಮಾಜದಲ್ಲಿ ಸ್ಥಾನಮಾನ ದ ಹೆಸರಲ್ಲಿ ಭಕ್ತರು ವಂಚನೆ ಮಾಡಿದ್ದೀರ. ಜಂಗಮ ಯೋಚಿಸದೆ ಹೆಜ್ಜೆ ಇಡುವವನಲ್ಲ, ಇಟ್ಟಮೇಲೆ ಹಿಂದೆ ತೆಗೆಯುವವನಲ್ಲ. ಪ್ರತಿ ಕ್ಷಣವು ಸಮಾಜದ, ಜನರ ಒಳಿತನ್ನು ಬಯಸಿದ, ತಮ್ಮ ಮನೆಗಳಲ್ಲಿ ಪ್ರಸಾದ ಸೇವಿಸಿ ನಿಮ್ಮೆಲ್ಲ ಪಾಪ ಕರ್ಮಾದಿಗಳನ್ನು ತಾನೇ ಸುತ್ತಿಕೊಂಡು ನಿಮ್ಮನೆಲ್ಲ ಸುಖವಾಗಿಡು ಭಗವಂತ ಎಂದು ಪ್ರಾರ್ಥಿಸುತ್ತಾ ತಾನು ಪಾಪಿಯಾಗಿ ಬಳಲುತ್ತಿದ್ದಾನೆ. ಸಾಕು ಇನ್ನು ನಿಮ್ಮ ಪಾಪದ ಕೆಲಸ ಅವನಿಗೆ ಸ್ವತಂತ್ರವಾಗಿ ಬದುಕಲು ಬಿಡಿ, ಹೆಚ್ಚಿನ ಅಧ್ಯಯನ ಮಾಡಿ, ಅರಿತು, ಮುಂದುವರೆದಿದ್ದೇವೆ. ಸಹಕರಿಸಿ. ನಿಮ್ಮ ಯಾವುದೇ ಹೇಳಿಕೆ ನಮಗೇನು ಮಾಡಲಾರದು. ಎಲ್ಲವು ಸತ್ಯ. ಕೊನೆಗೆ ಗಲ್ಲೋದು ಸತ್ಯನೇ…..🙏🙏🙏
ಲಿಂಗಾಯತ ಜಂಗಮರೇ ಬೇಡಜಂಗಮರು ಎನ್ನುವ ಪ್ರಾಥಮಿಕ ಸಾಂವಿಧಾನಿಕ ಅರಿವು, ಜ್ಞಾನ ಇರಬೇಕಾದದ್ದೇ ನಿಜ ಬಸವ ಮಾರ್ಗ..! ದ್ವೇಷಕ್ಕಾಗಿ ಜಂಗಮರ ಮೀಸಲಾತಿ ಹಕ್ಕು ಪ್ರಶ್ನಿಸುವುದಿದ್ದರೆ, ನಿಮ್ಮ ಬಳಿ ಸಾಂವಿಧಾನಿಕ ದಾಖಲೆಗಳಿದ್ದರೆ ಉಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸುವುದು ಬಸವ ಮಾರ್ಗ..! ದಾಖಲೆಗಳೊಂದಿಗೆ ರಾಜ್ಯ ಮಟ್ಟದ ಮಾಧ್ಯಮದಲ್ಲಿ ಚರ್ಚೆ ಏರ್ಪಡಿಸಿ, ಅದರಿಂದ ಜ್ಞಾನಾಮೃತ ಪಡೆದು ನಿಜ ಲಿಂಗಾಯತರಾಗುವುದು ನಿಜ ಬಸವ ಪ್ರೇಮವಾಗುತ್ತದೆ..! ದ್ವೇಷ ಅನಾರೋಗ್ಯದ ಮತ್ತು ರೋಗಗಳ ಮೂಲ. ಇದು ವೈಜ್ಞಾನಿಕವಾಗಿ Quantum Physics ಮುಖಾಂತರ ನಿರೂಪಿಸಲ್ಪಟ್ಟಿದೆ..!
ಎಲ್ಲಾ ಲಿಂಗಾಯತ ಸಮುದಾಯದ ಮಂದಿ ತಮ್ಮ ಉಪಜಾತಿಗೆ ಒಬ್ಬೊಬ್ಬ ಸ್ವಾಮಿಗಳನ್ನು ಸೃಷ್ಟಿ ಮಾಡಿಕೊಂಡು ಛಿದ್ರ ಛಿದ್ರ ಆಗಿದ್ದಾರೆ. ಎಲ್ಲಾ ಉಪಜಾತಿ ಸ್ವಾಮಿಗಳನ್ನು ತೆಗೆದು ಹಾಕಿ ಪಂಚಪೀಠದ ಜಗದ್ಗುರು ಗಳ ಮೇಲೆ ಜೊತೆ ಸೇರಿ. ಎಲ್ಲಾ ಉಪಜಾತಿ ಮಠಗಳನ್ನು ಪಂಚಪೀಠಗಳ ಸ್ವಾಧೀನಕ್ಕೆ ಕೊಡಿ. ನಮ್ಮ ಪರಂಪರೆ ಪ್ರಕಾರ ನಮ್ಮ ಸಮುದಾಯಕ್ಕೆ ಸೇರಬೇಕಾದ ಎಲ್ಲವನ್ನೂ ಸಂಪ್ರದಾಯದ ಪ್ರಕಾರ ಕೊಡುವಿರಾ…