ಶಹಾಪುರ: ಸಿಲಿಂಡರ್ ಸ್ಪೋಟಗೊಂಡ ಪರಿಣಾಮವಾಗಿ ಹೋಟೆಲ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಅಪಾರ ಪ್ರಮಾಣದ ನಷ್ಟವಾಗಿರುವ ಘಟನೆ ಶಹಾಪುರ ವಿಧಾನಸಭಾ ಕ್ಷೇತ್ರದ ಕೆಂಭಾವಿ ಪಟ್ಟಣದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಕೆಂಭಾವಿ ಪಟ್ಟಣದ ಈಶಪ್ಪ ಎಂಬುವರಿಗೆ ಸೇರಿದ ಹೋಟೆಲ್ ಆಗಿದ್ದು ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಸ್ಫೋಟಗೊಂಡ ಕಾರಣ ಅದೃಷ್ಟವಶವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಹೋಟೆಲ್ ಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಹೋಟೆಲಿನ ಅಕ್ಕಪಕ್ಕದ ಅಂಗಡಿಗಳಿಗೂ ಆವರಿಸಿಕೊಂಡು ಕೆಲವೊಂದು ಕ್ಷಣ ಜನರನ್ನು ಭಯಭೀತಗೊಳಿಸಿತ್ತು.
ಈ ಘಟನೆಯ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.