ಕಲಬುರಗಿ: ಸೇಡಂ ದಿಂದ ರಿಬ್ಬನ್ ಪಲ್ಲಿ ರಸ್ತೆಯಲ್ಲಿವ ಟೋಲ್ ನಾಕಾ ಹತ್ತಿರ ವಿರುವ ಡಾ. ಬಸವರಾಜ ಚನ್ನಾ ರವರ ಹೊಲದಲ್ಲಿ ಸಿತನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚನ್ನಾ ಅವರು ತಮ್ಮ ಹೊಲದಲ್ಲಿ ಮೊಟ್ಟ ಮೊದಲ ಬಾರಿ ಇಂತಹ ಉತ್ಸವ ಹಮ್ಮಿಕೊಂಡ ಪ್ರಯುಕ್ತ ಪಾಲ್ಗೊಂಡ ನೇಕಾರ ಬಳಗ ಹರ್ಷ ವ್ಯಕ್ತ ಪಡಿಸಿದರು.
ಮೊದಲಿಗೆ ಬಾರಿ ಹಣ್ಣು ನೀಡುವುದರ ಮೂಲಕ ಸ್ವಾಗತ , ನಂತರ ಕಬ್ಬು, ಹುರಿದ ಕಡಲೆ, ನಂತರ ಸಿತನಿ ಸ್ವದೇಶಿ ಬೆಲ್ಲ, ಸೇಂಗಾದ ಹಿಂಡಿ ಜೊತೆಗೆ ಭರ್ಜರಿ ಊಟ, ವ್ಯವಸ್ಥೆ ಮಾಡಿದ ಡಾ ಬಸವರಾಜ ಚನ್ನಾ ಅವರ ಪ್ರೇಮಕ್ಕೆ ಸೋತವರೆ ಇಲ್ಲದಂತಾಯಿತು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಪ್ರದೀಪ ಸಂಗಾ, ಮಾತನಾಡಿ, ನೇಕಾರರು ಇದೆ ರೀತಿ ಪ್ರೀತಿ, ವಿಶ್ವಾಸ ದಿಂದ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡರೆ ರಾಜಕೀಯವಾಗಿ ಸ್ಥಾನಮಾನ ಪಡೆದು ಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಮಾತನಾಡುತ್ತ ಇತ್ತೀಚೆಗೆ ದೇಶದ ಪ್ರಧಾನಿಗಳು ತಮ್ಮ ಭಾಷಣದಲ್ಲಿ ನೇಕಾರ ಪದ್ಮಸಾಲಿ ಸಮುದಾಯದವರ ಮನೆಯಲ್ಲಿ ಉಂಡು ಬೆಳೆದು ಮೇಲೆ ಬಂದಿದ್ದೇನೆ ಎಂದು ಸ್ಮರಿಸುವ ಅವರ ಗುಣದಂತೆ ತಾವು ಅಳವಡಿಸಿಕೊಂಡು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬನ್ನಿ ಎಂದು ತಿಳಿಸಿದರು.
ಈ ವಿಶಿಷ್ಟ ಸಿತನೋತ್ಸವ ಕಾರ್ಯಕ್ರಮದಲ್ಲಿ ನೇಕಾರ ಒಕ್ಕೂಟದ ಕಾರ್ಯದರ್ಶಿ ಶಾಂತ ಕುಮಾರ ಯಳಸಂಗಿ, ನೇಕಾರ ಸಂಘಟನೆಯ ದೇವಾಂಗ ಸಮಾಜದ ಅಧ್ಯಕ್ಷ ಹಣಮಂತ ಕಣ್ಣಿ, ಜಿಲ್ಲಾ ಹಟಗಾರ ಸಮಾಜದ ಯುವ ಘಟಕದ ಅಧ್ಯಕ್ಷ ರವಿ ಯಳಸಂಗಿ, ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪೂರ್, ಸದ್ಗುರು ದಾಸಿಮಯ್ಯ ನ್ಯಾಯ ಸೇವಾ ಸಮಿತಿಯ ಗೌರವ ಕಾರ್ಯದರ್ಶಿ ಜೇ. ಎಸ್.ವಿನೋದ ಕುಮಾರ, ಸಮಾಜದ ಹಿರಿಯರಾದ ಶ್ರೀ ಬಡ್ಡುರ ಮತ್ತು ಉತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಡಾ. ಚನ್ನಾ ಹಾಗೂ ಅವರ ಹೊಲದ ಪಾಲುದಾರ ಮೈನುದ್ದೀನ್ ದಂಪತಿಗಳು ಉಪಸ್ಥಿತರಿದ್ದರು.