ಟ್ರಕ್ ಡಿಕ್ಕಿಗೆ ಶಾಲಾ ಕಟ್ಟಡ ಜಖಂ: ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಯದಿಂದ ಪಾರು..!

0
35

ಕಲಬುರಗಿ: ಚಲಿಸುತ್ತಿದ್ದ ಸಕ್ಕರೆ ದಾಸ್ತಾನು ಹೊಂದಿದ ಟ್ರಕ್ಕೊಂದು ವೇಗವಾಗಿ ಚಾಲಕನ ನಿಯಂತ್ರಣ ತಪ್ಪಿ ಶಾಲೆಗೆ ರಭಸದಿಂದ ಡಿಕ್ಕಿ ಹೊಡೆದ ಘಟನೆ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಬಳಿ ಇರುವ ಜೈಭೀಮ್ ನಗರದಲ್ಲಿ ಶನಿವಾರ ಸಂಜೆ 4-30 ಗಂಟೆಗೆ ಸಂಭವಿಸಿದೆ. ಶನಿವಾರವಾಗಿದ್ದರಿಂದ ಬೆಳಿಗ್ಗೆ 8ರಿಂದ 11-30ರವರೆಗೆ ತರಗತಿಗಳನ್ನು ವಿದ್ಯಾರ್ಥಿಗಳು ಬೆಳಿಗ್ಗೆಯೇ ಶಾಲೆಯ ತರಗತಿಗಳನ್ನು ಮುಗಿಸಿ ಮನೆಗೆ ಮರಳಿದ್ದರಿಂದ ಅಪಘಾತದಲ್ಲಿ ಎಲ್ಲ ವಿದ್ಯಾರ್ಥಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗುವಂತೆ ಆಗಿದೆ.

ಬಳೂರ್ಗಿ ಗ್ರಾಮದ ಸಮೀಪದಲ್ಲಿ ಇರುವ ಜೈಭೀಮ್ ನಗರವು ರಾಷ್ಟ್ರೀಯ ಹೆದ್ದಾರಿ 154ಇ ರಸ್ತೆಯ ಬದಿಯಲ್ಲಿಯೇ ಇದೆ. ಹೀಗಾಗಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಶಾಲೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಲಾ ಕಟ್ಟಡ ಜಖಂಗೊಂಡಿದೆ. ಎರಡು ಶಾಲಾ ಕೋಣೆಗಳ ಗೋಡೆಗಳು ಬಿದ್ದಿವೆ. ಆದಾಗ್ಯೂ, ಅಪಘಾತದ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇರದೇ ಇದ್ದುದರಿಂದ ಯಾವುದೇ ರೀತಿಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ.

Contact Your\'s Advertisement; 9902492681

ಒಂದು ವೇಳೆ ಶಾಲೆಯ ಅವಧಿಯಲ್ಲಿಯೇನಾದರೂ ಟ್ರಕ್ ಶಾಲೆಗೆ ಗುದ್ದಿದ್ದರೆ ಪ್ರಾಣಹಾನಿಗಳು ಆಗುತ್ತಿದ್ದವು ಎಂಬುದು ಗ್ರಾಮಸ್ಥರ ಆತಂಕವವಾಗಿದೆ. ಡಿಕ್ಕಿ ಹೊಡೆದ ಶಾಲೆಯ ಕಟ್ಟದಲ್ಲಿ ಮಕ್ಕಳು ಇದ್ದರೆ ಅವರಿಗೆ ಅಪಾಯವಾಗುತ್ತಿತ್ತು ಎಂಬ ಕಳವಳವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

ಶಾಲೆಯ ಸಮೀಪದಲ್ಲಿಯೇ ಹೆದ್ದಾರಿ ಹಾದು ಹೋಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹೆದ್ದಾರಿ ಪ್ರಾಧಿಕಾರದವರು, ಸಂಬಂಧಿಸಿದ ಶಿಕ್ಷಣ ಮತ್ತು ಪೋಲಿಸ್ ಇಲಾಖೆಯವರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ದೂರು ಗ್ರಾಮಸ್ಥರದ್ದಾಗಿದೆ. ಈಗಾಗಲೇ ಹಲವಾರು ಬಾರಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೆದ್ದಾರಿ ಬಲ ಬದಿಗೆ ಶಾಲೆಯ ಪಕ್ಕವೇ ಸುರಕ್ಷತಾ ಆವರಣ ಗೋಡೆ ನಿರ್ಮಿಸುವಂತೆ ಕೋರಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಸುರಕ್ಷಿತ ಆವರಣ ಗೋಡೆ ಇರದೇ ಇದ್ದುದರಿಂದ ವಾಹನಗಳು ಆಯತಪ್ಪಿ ಶಾಲೆಗೆ ಡಿಕ್ಕಿ ಹೊಡೆಯುವ ಸಂಭವ ಇದೆ. ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆಯನ್ನು ಪೋಷಕರು ಇಟ್ಟಿದ್ದಾರೆ.

ಹೆದ್ದಾರಿ ಪಕ್ಕದಲ್ಲಿಯೇ ಶಾಲೆ ಇದ್ದರೂ ಸಹ ಸುರಕ್ಷತಾ ಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತೆಗೆದುಕೊಳ್ಳುವುದು ಎದ್ದು ಕಂಡುಬರುತ್ತಿದೆ. ಕೊನೆಗೆ ಅಧಿಕಾರಿಗಳಿಗಿಂತಲೂ ಶಾಲಾ ಉಸ್ತುವಾರಿ ಸಮಿತಿಯು ಸಹ ಶಾಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನಿಸಿ ಶಾಲೆಯ ಸುತ್ತ ಆವರಣದ ಗೋಡೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಶಾಲೆಯ ಆಡಳಿತ ಮಂಡಳಿಯ ವೈಫಲ್ಯವೂ ಸಹ ಎದ್ದು ಕಾಣುತ್ತಿದೆ.

ಇನ್ನು ಹೆದ್ದಾರಿಯ ಪಕ್ಕ ಕಬ್ಬಿಣದ ದೊಡ್ಡ ಸೆರಳು ಹಾಕಿ ಅದನ್ನೇ ಸುರಕ್ಷತೆ ಎಂದು ಶಾಲೆಯ ಸಮೀಪ ಬಿಂಬಿಸಲಾಗಿದೆ. ಆ ಕಬ್ಬಿಣದ ಸೆರಳಿನ ಕೆಳಗಡೆಯಿಂದಲೂ ವಿದ್ಯಾರ್ಥಿಗಳು ರಸ್ತೆ ದಾಟಲು ಅವಕಾಶವಿದೆ. ಅದೇ ರೀತಿ ಆ ಸೆರಳಿನ ಮೇಲೆ ಜಿಗಿದು ಹೋಗಲೂ ಸಹ ಅವಕಾಶವಿದೆ. ಶಾಲಾ ವಿದ್ಯಾರ್ಥಿಗಳು ಯಾವುದನ್ನೂ ಪರಿಗಣಿಸದೇ ಶಾಲೆಗೆ ಬರುವಾಗ ಹಾಗೂ ಶಾಲೆಯಿಂದ ನಿರ್ಗಮಿಸುವಾಗ ಆ ಸೆರಳಿನ ಮೇಲ್ಭಾಗದಿಂದ ಜಿಗಿದು ಇಲ್ಲವೇ ಸೆರಳಿನ ಕೆಳಗಡೆಯಿಂದ ನೂಕಿಕೊಂಡು ಸಂಚರಿಸುತ್ತಾರೆ.

ಹೆದ್ದಾರಿಯಾಗಿದ್ದರಿಂದ ವಾಹನಗಳ ಸಂಚಾರ ಇದ್ದೇ ಇರುತ್ತದೆ. ಆ ಸಂದರ್ಭದಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಅಪಾಯ ತಪ್ಪಿದ್ದಲ್ಲ.
ತಾಲ್ಲೂಕು ತಹಸಿಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಮತ್ತು ಹೆದ್ದಾರಿ ಪ್ರಾಧಿಕಾರದವರು ಈ ಕುರಿತು ಗಮನಿಸಿ ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕೂ ಮುನ್ನ ಶಾಲಾ ಆಡಳಿತ ಮಂಡಳಿಯೇ ಸ್ವಯಂ ಪ್ರೇರಣೆಯಿಂದ ತಮ್ಮ ವಿದ್ಯಾರ್ಥಿಗಳ ಸುರಕ್ಷತೆಗೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಈ ಮಧ್ಯೆ, ಪೋಷಕರು ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ತಕ್ಷಣವೇ ಕ್ರಮ ಕೈಗೊಳ್ಳದೇ ಹೋದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಪಾದಯಾತ್ರೆ, ಧರಣಿ: ಈ ಹಿಂದೆ ಇದೇ ಶಾಲೆಯ ವಿದ್ಯಾರ್ಥಿಗಳು ನಿವೇಶನದ ಸಮಸ್ಯೆ ಕುರಿತು ಪರಿಹಾರಕ್ಕಾಗಿ ಗ್ರಾಮದಿಂದ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾದಯಾತ್ರೆ ಕೈಗೊಂಡು ದಿನದ ಮಟ್ಟಿಗೆ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ನಿವೇಶನದ ಮಾಲಿಕರು ನಮ್ಮದೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಶಾಲೆ ಗೋಮಾಳ್ ಜಮೀನಿನಲ್ಲಿದೆ ಎಂದು ಕೆಲವು ವಿದ್ಯಾರ್ಥಿಗಳ ಪೋಷಕರ ವಾದವಾಗಿತ್ತು.

ಶಾಲೆಯ ಸಮಸ್ಯೆ ಹಾಗೂ ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ತಾಲ್ಲೂಕು ಆಡಳಿತ ಹಾಘೂ ಶಿಕ್ಷಣ ಇಲಾಖೆ ಪರಿಹಾರಕ್ಕೆ ಈಗಲಾದರೂ ಮುಂದಾಗುತ್ತಾ ಎಂಬ ಯಕ್ಷ ಪ್ರಶ್ನೆ ಈಗಲೂ ಸಹ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಎನ್ನುವುದಕ್ಕೆ ಅಪಘಾತವೇ ತಾಜಾ ನಿದರ್ಶನವಾಗಿದೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here