ಶಹಾಬಾದ: ಸಂಸದ ಡಾ.ಉಮೇಶ ಜಾಧವ ಅವರು ಕೇವಲ ಎರಡು ರೇಲ್ವೆಗಳನ್ನು ಶಹಾಬಾದ ನಿಲ್ದಾಣದಲ್ಲಿ ನಿಲ್ಲಿಸಿರುವುದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದರಾಗಿ ಐದು ವರ್ಷದ ಅವಧಿಯಲ್ಲಿ ಮಾಡಿದ ದೊಡ್ಡ ಸಾಧನೆಯೆಂದರೆ ಎರಡು ರೈಲುಗಳನ್ನು ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ನಿಲ್ಲಿಸಿರುವುದು.ಕಲಬುರಗಿ ರೇಲ್ವೆ ವಿಭಾಗವನ್ನು ಉಳಿಸುಕೊಳ್ಳವಲ್ಲಿ ವಿಫಲರಾದ ಇವರು ಇಲ್ಲಿನ ಜನರಿಗೆ ಯಾವ ಉತ್ತರ ನೀಡುತ್ತಾರೆ.ಐದು ವರ್ಷದಲ್ಲಿ ಯಾವುದೇ ಸಾಧನೆ ಮಾಡದೇ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ನಾಮಕವಾಸ್ತೆ ರೈನ್ನು ನಿಲ್ಲಿಸಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ರೇಲ್ವಗಳನ್ನು ಕೊಟ್ಟರು.ರೇಲ್ವೆಗಳನ್ನು ನಿಲ್ಲುವಂತೆ ಮಾಡಿದರು.ಆದರೆ ಬಿಜೆಪಿಯವರು ಅವುಗಳನ್ನು ನಿಲ್ಲಿಸಿ, ಈಗ ಚುನಾವಣೆ ಸಂದರ್ಭದಲ್ಲಿ ಮತ್ತೆ ಆ ಎರಡು ರೇಲ್ವೆಗಳನ್ನು ನಿಲ್ಲಿಸಿದ್ದೇ ದೊಡ್ಡ ಸಾಧನೆ ಎಂದು ಪ್ರತಿಭಿಂಬಿಸುತ್ತಿದ್ದಾರೆ.
ಯವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ಎಂಬ ಆರೋಪ ಜನಮಾನಸದಲ್ಲಿ ಮನೆಮಾಡಿದೆ.ಸ್ವಪಕ್ಷದ ಮುಖಂಡರೇ ಈ ಬಾರಿ ಟಿಕೆಟ್ ನೀಡಬಾರದು ಎಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ.ಅಲ್ಲದೇ ಸಂಸದರ ನಿಧಿ ಬಳಕೆಯಲ್ಲಿ ಕೊನೆಯ ಸ್ಥಾನವನ್ನು ಪಡೆದಿರುವ ಸಂಸದ ಎಂಬ ಹೆಗ್ಗಳಿಕೆಯನ್ನು ಜಾಧವ ಪಡೆದುಕೊಂಡಿದ್ದಾರೆ.ಕಲಬುರಗಿಯ ಜನರು ಸಂಸzರ ನಡುವಳಿಕೆಯಿಂದ ಬೇಸತ್ತು ಹೋಗಿದ್ದಾರೆ.ಈ ಬಾರಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಾ.ರಶೀದ್ ತಿಳಿಸಿದ್ದಾರೆ.